HEALTH TIPS

'ಫೈಲಿಂಗ್' ನಿಯಮಗಳಲ್ಲಿ ಬದಲಾವಣೆ ; ಜುಲೈ'ನಿಂದ 3 ವರ್ಷಗಳ ಅವಧಿ ಮುಗಿದ 'GST ಫೈಲಿಂಗ್' ನಿರ್ಬಂಧ

ನವದೆಹಲಿ : ಸರಕು ಮತ್ತು ಸೇವಾ ತೆರಿಗೆ ಜಾಲ (GSTN) GST ರಿಟರ್ನ್‌'ಗಳ ಸಲ್ಲಿಕೆಯಲ್ಲಿ ಗಮನಾರ್ಹ ಬದಲಾವಣೆಯನ್ನ ಘೋಷಿಸಿದ್ದು, ಜುಲೈ 2025ರ ತೆರಿಗೆ ಅವಧಿಯಿಂದ ಜಾರಿಗೆ ಬರುವ ಮೂಲ ಗಡುವು ದಿನಾಂಕದಿಂದ 3 ವರ್ಷಗಳ ಅವಧಿ ಮುಗಿದ ರಿಟರ್ನ್‌'ಗಳನ್ನ ಸಲ್ಲಿಸಲಾಗುವುದಿಲ್ಲ ಎಂದು ಕಡ್ಡಾಯಗೊಳಿಸಿದೆ.

ಇದರರ್ಥ ತೆರಿಗೆದಾರರು ಜುಲೈ 2025ರ ಅವಧಿಗೆ ಆಗಸ್ಟ್ 2025ರಲ್ಲಿ ತಮ್ಮ ಮಾಸಿಕ ರಿಟರ್ನ್‌'ಗಳನ್ನ ಹೊಸ ಟೈಮ್-ಬಾರ್ ನೀತಿಗೆ ಬದ್ಧರಾಗಿ ಸಲ್ಲಿಸಬೇಕಾಗುತ್ತದೆ. ಪರಿಣಾಮ ಬೀರುವ ರಿಟರ್ನ್‌'ಗಳಲ್ಲಿ GSTR-1, GSTR-3B, GSTR-4, GSTR-5, GSTR-5A, GSTR-6, GSTR-7, GSTR-8 ಮತ್ತು GSTR-9 ಸೇರಿವೆ. ಸಮಯ ನಿರ್ಬಂಧಕ್ಕೆ ಸಂಬಂಧಿಸಿದಂತೆ ಸರಕು ಮತ್ತು ಸೇವಾ ತೆರಿಗೆ (GST) ಕಾನೂನಿಗೆ ತಿದ್ದುಪಡಿಗಳನ್ನ ಹಣಕಾಸು ಕಾಯ್ದೆ, 2023 ಮೂಲಕ ಪರಿಚಯಿಸಲಾಯಿತು.

"ಮೂರು ವರ್ಷಗಳ ಅವಧಿ ಮುಗಿದ ನಂತರ ರಿಟರ್ನ್ಸ್ ಸಲ್ಲಿಸುವುದನ್ನ ನಿಷೇಧಿಸಲಾಗುವುದು. ಜುಲೈ 2025ರ ತೆರಿಗೆ ಅವಧಿಯಿಂದ ಜಿಎಸ್‌ಟಿ ಪೋರ್ಟಲ್‌'ನಲ್ಲಿ ಈ ನಿರ್ಬಂಧವನ್ನ ಜಾರಿಗೆ ತರಲಾಗುವುದು" ಎಂದು ಜಿಎಸ್‌ಟಿಎನ್ ಸಲಹಾ ಸಂಸ್ಥೆ ತಿಳಿಸಿದೆ. ಈ ಬೆಳವಣಿಗೆಯು ತೆರಿಗೆದಾರರು ತೊಡಕುಗಳನ್ನ ತಪ್ಪಿಸಲು ಸಕಾಲಿಕ ಫೈಲಿಂಗ್‌'ಗಳನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನ ಒತ್ತಿಹೇಳುತ್ತದೆ.

GST ಫೈಲಿಂಗ್ ವ್ಯವಸ್ಥೆಯನ್ನ ಸುಗಮಗೊಳಿಸಲು ಮತ್ತು ಅನುಸರಣೆಯನ್ನ ಹೆಚ್ಚಿಸಲು GSTN ನಡೆಸುತ್ತಿರುವ ನಿರಂತರ ಪ್ರಯತ್ನಗಳ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚುವರಿಯಾಗಿ, ಈ ನೀತಿಯು ಆಡಳಿತಾತ್ಮಕ ಹೊರೆಯನ್ನ ಕಡಿಮೆ ಮಾಡುವುದು ಮತ್ತು ತೆರಿಗೆದಾರರ ಡೇಟಾವನ್ನ ನಿರ್ವಹಿಸುವಲ್ಲಿ GST ವ್ಯವಸ್ಥೆಯು ಪರಿಣಾಮಕಾರಿಯಾಗಿರುವುದನ್ನ ಖಚಿತಪಡಿಸಿಕೊಳ್ಳುವ ಗುರಿಯನ್ನ ಹೊಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries