ದೆಹಲಿಯಲ್ಲಿ 47 ಹೊಸ ಸೋಂಕುಗಳು ಹಾಗೂ ಒಂದು ಸಾವು ದಾಖಲಾಗಿ, ಕೇರಳ, ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಪ್ರಕರಣಗಳ ಹಾಗೂ ಸಾವಿನ ಸಂಖ್ಯೆ ಯಲ್ಲೂ ಹೆಚ್ಚಳ ಕಂಡು ಬಂದಿದೆ.
ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಹೆಚ್ಚಿನ ಸೋಂಕುಗಳು ಸೌಮ್ಯ ಲಕ್ಷಣಗಳೊಂದಿಗೆ ಇರುತ್ತವೆಯಾದರೂ, ತೀವ್ರತೆ ಹೆಚ್ಚಾದರೆ ಆಸ್ಪತ್ರೆಗಳಲ್ಲಿ ಸಿದ್ಧತೆ ಇರಬೇಕೆಂದು ಸೂಚನೆ ನೀಡಲಾಗಿದೆ.




