ಕಾಲ್ಗರಿ : ಜಿ 7 ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಕೆನೆಡಾಗೆ ತೆರಳಿದ್ದಾರೆ. ಕಾನಾನಸ್ಕಿಸ್ ನಲ್ಲಿ ನಡೆಯಲಿರುವ 51ನೇ ಜಿ7 ಶೃಂಗಸಭೆಯಲ್ಲಿ ಇಂದು ಹಲವು ದೇಶಗಳ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
ಕೆನಡಾದಲ್ಲಿ ಕಾಲಿರಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಸಂದೇಶ ಹಂಚಿಕೊಂಡಿದ್ದಾರೆ. ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಕಾಲ್ಗರಿಗೆ ಇಂದು ಬಂದು ಸೇರಿದೆ. ಇಂದು ಜಾಗತಿಕ ಸಮಸ್ಯೆಗಳ ಬಗ್ಗೆ ಹಲವು ದೇಶಗಳ ಪ್ರಮುಖರೊಂದಿಗೆ ಚರ್ಚೆ ನಡೆಯಲಿದೆ. ದಕ್ಷಿಣದ ದೇಶಗಳ ಅಭಿವೃದ್ಧಿ ಹಾಗೂ ಆದ್ಯತೆಗಳ ಬಗ್ಗೆಯೂ ಇಂದು ಚರ್ಚೆ ನಡೆಯಲಿದೆ ಎಂದು ಹೇಳಿದ್ದಾರೆ.




