HEALTH TIPS

ದಶಕಗಳ ಹಿಂದೆ 'ಕುಚಿಕು' ಗೆಳೆಯರಾಗಿದ್ದ ಇಸ್ರೇಲ್ - ಇರಾನ್ ಈಗ ಶತ್ರುಗಳಾಗಿದ್ದೇಕೆ?

ಟೆಲ್ ಅವಿವ್/ಟೆಹರಾನ್: ಇವತ್ತು ಪರಸ್ಪರರ ಮೇಲೆ ಕ್ಷಿಪಣಿಗಳ ಮಳೆಗರೆಯುತ್ತಾ, ಒಬ್ಬರ ನಾಶಕ್ಕಾಗಿ ಮತ್ತೊಬ್ಬರು ಪಣತೊಟ್ಟಂತೆ ಹೋರಾಡುತ್ತಿರುವ ಇಸ್ರೇಲ್ ಹಾಗೂ ಇರಾಕ್ ದೇಶಗಳು ಈಗ್ಗೆ ಸುಮಾರು 75 ವರ್ಷಗಳ ಹಿಂದೆ ಆಪ್ತಮಿತ್ರರಾಗಿದ್ದರು ಎಂಬುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ.

ಇಸ್ರೇಲ್ - ಒಂದು ದೇಶ ಎಂಬ ಸ್ಥಾನಮಾನ ಪಡೆಯಲು ಇರಾನ್ ಆಗ ಸಹಾಯ ಮಾಡಿತ್ತು. ಅದಕ್ಕೆ ಪೂರಕವಾಗಿ, ಇಸ್ರೇಲ್ ಕೂಡ ಇರಾನ್ ಗೆ ತಂತ್ರಜ್ಞಾನ, ಶಸ್ತ್ರಾಸ್ತ್ರ ಸರಬರಾಜು, ಗುಪ್ತಚರ ಮಾಹಿತಿ ಹಂಚಿಕೆ ಇತ್ಯಾದಿ ಸಹಾಯಗಳನ್ನು ಮಾಡಿದೆ. ಆದರೆ, ಆನಂತರ 1979ರಲ್ಲಿ ಎರಡೂ ದೇಶಗಳ ನಡುವೆ ಬ್ರೇಕಪ್ ಆಗಿದೆ. ಯಾಕಾಯ್ತು? ಇಲ್ಲಿದೆ ಕುತೂಹಲಕರ ಮಾಹಿತಿ.

ಒಂದಾನೊಂದು ಕಾಲದಲ್ಲಿ ಆರಂಭ….

ಇವತ್ತು ಒಬ್ಬರನ್ನೊಬ್ಬರು ಮುಗಿಸಲು ಹೀಗೆ ಹೊಂಚು ಹಾಕುತ್ತಿರುವ, ಬದ್ಧ ವೈರಿಗಳಾಗಿರುವ ಇಸ್ರೇಲ್ ಹಾಗೂ ಇರಾನ್ ದೇಶಗಳು, ಈಗ್ಗೆ ಸುಮಾರು 50 ವರ್ಷಗಳ ಹಿಂದೆ ಅತ್ಯುತ್ತಮ ಸ್ನೇಹಿತರಾಗಿದ್ದರು ಎಂಬುದನ್ನು ಇವತ್ತಿನ ಪೀಳಿಗೆಯ ಜನರು ಬಹುಶಃ ನಂಬಲಿಕ್ಕಿಲ್ಲ. 1948ರಲ್ಲಿ ಇಸ್ರೇಲ್ ಎಂಬ ದೇಶ ಹುಟ್ಟಿದಾಗ, ಆ ದೇಶಕ್ಕೆ ಒಂದು ರಾಷ್ಟ್ರದ ಸ್ಥಾನಮಾನ ನೀಡಲು ಜಗತ್ತಿನ ಬಹುತೇಕ ಇಸ್ಲಾಂ ರಾಷ್ಟ್ರಗಳು ಸಿದ್ಧವಿರಲಿಲ್ಲ. ಕೇವಲ ಕ್ರೈಸ್ತ ಧರ್ಮೀಯ ರಾಷ್ಟ್ರಗಳಷ್ಟೇ ಇಸ್ರೇಲ್ ಅನ್ನು ಒಂದು ದೇಶ ಎಂಬ ಸ್ಥಾನಮಾನ ನೀಡಲು ಒಪ್ಪಿಗೆ ಸೂಚಿಸಿದ್ದವು. ಇನ್ನು, ಭಾರತ, ತನ್ನ ಅಲಿಪ್ತ ನೀತಿಯಿಂದಾಗಿ ತಟಸ್ಥವಾಗಿತ್ತು.

ಅಂಥ ಸಂದರ್ಭದಲ್ಲಿ ಇಸ್ರೇಲ್ ಬೆನ್ನಿಗೆ ನಿಂತಿದ್ದು ಇದೇ ಇರಾನ್ ಹಾಗೂ ಇರಾನ್ ದೇಶದ ಮಿತ್ರ ಟರ್ಕಿ. ಆಗ ಇರಾನ್ ದೇಶದ ಅಧ್ಯಕ್ಷರಾಗಿದ್ದವರು ಶಾ ಮೊಹಮ್ಮದ್ ರೆಝಾ ಪಹ್ಲವಿ. ಅವರಿಗೂ ಅಮೆರಿಕಕ್ಕೂ ಬಾಂಧವ್ಯ ಚೆನ್ನಾಗಿತ್ತು. ಇಸ್ರೇಲಿಗೆ ದೇಶದ ಸ್ಥಾನಮಾನ ಕೊಡಿಸುವ ಇರಾದೆಯನ್ನು ಹೊಂದಿದ್ದ ಅಮೆರಿಕದ ಮುಲಾಜಿಗೆ ಬಿದ್ದಿದ್ದ ಶಾ ಮೊಹಮ್ಮದ್, ತಾವೂ ಇಸ್ರೇಲ್ ಗೆ ಒಂದು ರಾಷ್ಟ್ರದ ಸ್ಥಾನಮಾನ ನೀಡಲು ಒಪ್ಪಿಗೆ ಸೂಚಿಸಿತ್ತು.

ವಿಶ್ವಸಂಸ್ಥೆಯಲ್ಲಿಯೂ ಇಸ್ರೇಲ್ ಒಂದು ದೇಶ ಎಂದು ಘೋಷಣೆಯಾದ ನಂತರ, ಇರಾನ್ ನಲ್ಲಿ ಹಲವಾರು ದಶಕಗಳವರೆಗೆ ಶಾ ಮೊಹಮ್ಮದ್ ಅವರ ಸರ್ಕಾರವೇ ಇದ್ದಿದ್ದರಿಂದ ಹಾಗೂ ಇತ್ತ ಇಸ್ರೇಲಿನಲ್ಲಿ ಡೇವಿಡ್ ಬೆನ್ ಗುರಿಯನ್ ಅವರ ಸರ್ಕಾರವಿದ್ದಿದ್ದರಿಂದ ಎರಡೂ ದೇಶಗಳ ನಡುವೆ ವ್ಯಾಪಾರ - ವ್ಯವಹಾರಗಳು ನಡೆದವು. ಅದೇ ಸಂದರ್ಭದಲ್ಲಿ ಇಸ್ರೇಲಿನ ಮೊದಲ ಪ್ರಧಾನಿ ಡೇವಿಡ್ ಬೆನ್ ಗುರಿಯನ್, ಇಸ್ರೇಲ್ ನ ವಿದೇಶಾಂಗ ಇಲಾಖೆಯಲ್ಲಿ ಪರಿಧಿ ಸಿದ್ಧಾಂತವನ್ನು (Periphery Doctrine) ನೀತಿಯನ್ನು ಜಾರಿಗೆ ತಂದರು. ಆ ಮೂಲಕ ಅರಬ್ ಹೊರತಾದ ದೇಶಗಳೊಂದಿಗೆ ಕೈ ಜೋಡಿಸಿ ಇಸ್ರೇಲ್ ದೇಶವನ್ನು ಅಭಿವೃದ್ಧಿಗೊಳಿಸುವುದು.



ಆ ನೀತಿಯಡಿಯಲ್ಲಿ ಅರಬ್ ಹೊರತಾದ ದೇಶಗಳಾದ ಇರಾನ್, ಟರ್ಕಿ ದೇಶಗಳೊಡನೆ (ಇವೆರಡೂ ಪರ್ಷಿಯನ್ ರಾಷ್ಟ್ರಗಳು) ವ್ಯಾಪಾರ ವ್ಯವಹಾರವನ್ನು ಇನ್ನೂ ದೊಡ್ಡಮಟ್ಟದಲ್ಲಿ ನಡೆಸಿತು. ಇರಾನ್ ನಿಂದ ಇಸ್ರೇಲಿಗೆ ಕಚ್ಚಾ ತೈಲ ಸರಬರಾಜಾಗುತ್ತಿತ್ತು. ಇಸ್ರೇಲ್ ನಿಂದ ಇರಾನ್ ಗೆ ತಂತ್ರಜ್ಞಾನ, ಶಸ್ತ್ರಾಸ್ತ್ರ ಪೂರೈಕೆ, ಗುಪ್ತಚರ ಇಲಾಖೆಯ ಮಾಹಿತಿ ಶೇರಿಂಗ್ ಇತ್ಯಾದಿಗಳು ನಡೆಯುತ್ತಿದ್ದವು. ಅಷ್ಟೇ ಅಲ್ಲ, ಇಸ್ರೇಲ್ ಸೇನೆಯಾದ ಮೊಸ್ಸಾದ್ ಹಾಗೂ ಇರಾನ್ ಸೇನೆಯಾದ ಸವಾಕ್ ನಡುವೆ ಪರಸ್ಪರ ಸಹಕಾರವಿತ್ತು.

ಆದರೆ, 1979ರಲ್ಲಿ ಎಲ್ಲವೂ ಬದಲಾಯಿತು. ಇರಾನ್ ನಲ್ಲಿ, ದೊಡ್ಡ ರಾಜಕೀಯ ಕ್ಷಿಪ್ರ ಕ್ರಾಂತಿ ಏರ್ಪಟ್ಟು ಮೂಲಭೂತವಾದಿ ಶಕ್ತಿಗಳು ಶಾ ಮೊಹಮ್ಮದ್ ಸರ್ಕಾರವನ್ನು ಕೆಡವಿ, ತಮ್ಮ ಸರ್ಕಾರ ಬರುವಂತೆ ಮಾಡಿದವು. ಆಗ ಅಲ್ಲಿ ಅಯಾಟೊಲ್ಲಾಹ್ ರುಹುಲ್ಲೊಹ್ ಖಮೇನಿ ರಾಷ್ಟ್ರಾಧ್ಯಕ್ಷರಾಗಿ ಅಧಿಕಾರಕ್ಕೆ ಬಂದರು. ಈಗಲೂ ಅವರೇ ಅಧ್ಯಕ್ಷ. ಮೊದಲೇ ಮೂಲಭೂತವಾದಿಗಳಾಗಿದ್ದರಿಂದ ಖಮೇನಿ ಸರ್ಕಾರ, ಇಸ್ರೇಲಿನ ಪರಮ ಶತ್ರುಗಳಾದ ಪ್ಯಾಲೆಸ್ತೇನಿಯನ್ನರಿಗೆ ಹಣ ಹಾಗೂ ಮತ್ತಿತರ ಸಹಾಯ ಮಾಡಲು ಆರಂಭಿಸಿತು. ಇದು ಇಸ್ರೇಲಿಗೆ ಸರಿಬೀಳಲಿಲ್ಲ.

ಇರಾನ್ ನಡೆಯನ್ನು ಖಂಡಿಸಿದ ಇಸ್ರೇಲ್ ಅನ್ನು ಇರಾನ್ ಬಹಿಷ್ಕರಿಸಿತು. ಇಸ್ರೇಲ್ ಪಾಸ್ ಪೋರ್ಟ್ ಗಳಿಗೆ ಇರಾನ್ ನಲ್ಲಿದ್ದ ಮಾನ್ಯತೆಯನ್ನು ಹಿಂಪಡೆಯಿತು. ಇಲ್ಲದೆ, ಇಸ್ರೇಲನ್ನು ಇಸ್ಲಾಂ ಧರ್ಮದ ವಿರೋಧಿ ರಾಷ್ಟ್ರ ಎಂದು ಘೋಷಿಸಲಾಯಿತು. ಖುದ್ದು ಮೈನೇನಿಯವರೇ ಖುದ್ದು ಅಮೆರಿಕವನ್ನು ದೊಡ್ಡ ದೆವ್ವ ಎಂದು ಕರೆದು, ಇಸ್ರೇಲನ್ನು ಚಿಕ್ಕ ದೆವ್ವ ಎಂದು ಟೀಕಿಸಿದರು.

ಭಾರತದ ಕ್ಷಮೆ ಕೋರಿದ ಇಸ್ರೇಲ್

ಇತ್ತೀಚೆಗೆ ಇಸ್ರೇಲ್, ಭಾರತದ ವಿಚಾರದಲ್ಲಿ ಒಂದು ಯಡವಟ್ಟು ಮಾಡಿಕೊಂಡಿತ್ತು. ಅದೇನೆಂದರೆ, ಇರಾನ್ ಹಾಗೂ ತನ್ನ ಭೂಗಡಿಗಳನ್ನು ತೋರಿಸುವ ಮ್ಯಾಪ್ ಒಂದನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಇರಾನ್ ಗೆ ಹತ್ತಿರವಿರುವ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ರಾಷ್ಟ್ರಗಳ ಗಡಿಗಳನ್ನೂ ಗುರುತು ಮಾಡಲಾಗಿತ್ತು.

ಇದನ್ನು ಟ್ವಿಟರ್ ನಲ್ಲಿ ಅನೇಕ ಭಾರತೀಯರು ಖಂಡಿಸಿದಾಗ, ಇಸ್ರೇಲ್ ಭಾರತದ ಕ್ಷಮೆಯಾಚಿಸಿದೆ.

ಇರಾನ್ ಅಧ್ಯಕ್ಷರ ಆಪ್ತನ ಹತ್ಯೆ

ಇರಾನ್ ದೇಶವನ್ನು ಇನ್ನಿಲ್ಲದಂತೆ ಹೊಡೆದು ಹಾಕಬೇಕು ಎಂಬ ಉದ್ದೇಶದೊಂದಿಗೆ ಆ ರಾಷ್ಟ್ರದೊಂದಿಗೆ ಯುದ್ಧಕ್ಕಿಳಿದಿರುವ ಇಸ್ರೇಲ್, ಇರಾನ್ ಗೆ ಜೂ. 17ರಂದು ಮತ್ತೊಂದು ಶಾಕ್ ನೀಡಿದೆ. ಇತ್ತೀಚೆಗಷ್ಟೇ ಆ ರಾಷ್ಟ್ರದ ಸೇನಾ ಮುಖ್ಯಸ್ಥ, ವಿವಿಧ ವಿಜ್ಞಾನಿಗಳನ್ನು ಬಲಿ ಪಡೆದಿದ್ದ ಇಸ್ರೇಲ್, ಜೂ. 17ರಂದು ಇರಾನ್ ರಾಷ್ಟ್ರಾಧ್ಯಕ್ಷರ ಅತ್ಯಂತ ಆಪ್ತರಾಗಿದ್ದ ಅಲಿ ಶಾದ್ಮಾನಿ ಅವರನ್ನು ಹತ್ಯೆ ಮಾಡಿವೆ.


ಇಸ್ರೇಲನ್ನು ನಡುನೀರನಲ್ಲಿ ಕೈಬಿಟ್ಟರೇ ಟ್ರಂಪ್?

ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ನಡೆಯುತ್ತಿದೆ. ಇರಾನ್ ಗೆ ಮುಸ್ಲಿಂ ರಾಷ್ಟ್ರಗಳ ಕುಮ್ಮಕ್ಕಿದ್ದರೆ ಇಸ್ರೇಲಿಗೆ ಅಮೆರಿಕ ಬೆನ್ನೆಲುಬಾಗಿದೆ. ಆದರೆ, ಜೂನ್ ತಿಂಗಳಲ್ಲಿ ಚಿತ್ರಣ ಕೊಂಚ ಬದಲಾಗಿದೆ. ಹೆಚ್ಚಿನ ಶಸ್ತ್ರಾಸ್ತ್ರ ಹಾಗೂ ಸೇನಾ ನೆರವನ್ನು ಕೋರಿ ಇಸ್ರೇಲ್ ಅಮೆರಿಕಕ್ಕೆ ಕಳುಹಿಸಿದ ಸಂದೇಶಕ್ಕೆ ಪ್ರತಿಯಾಗಿ ಅಮೆರಿಕದಿಂದ ಯಾವುದೇ ಉತ್ತರ ಬಂದಿಲ್ಲ. ಇದು ಇಸ್ರೇಲ್ ಗೆ ಅಮೆರಿಕ ಬೆಂಬಲ ಕೊಡುತ್ತದೋ ಇಲ್ಲವೋ ಎಂಬ ಅನುಮಾನವನ್ನು ಹುಟ್ಟಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries