ಕೆಲವರ ಬಳಿ ಮಾತ್ರ ಮೊಬೈಲ್ ಫೋನ್ ಇದ್ದ ಕಾಲವೊಂದಿತ್ತು. ಆದರೆ, ಈಗ ಎಲ್ಲರ ಕೈಯಲ್ಲೂ ಮೊಬೈಲ್ ಲಭ್ಯವಿದೆ. ಮೊಬೈಲ್ ಫೋನ್ ಬಳಕೆ ಹೆಚ್ಚಾದಂತೆ, ಆರೋಗ್ಯದ ಅಪಾಯಗಳೂ ಹೆಚ್ಚಾದವು.
ಇನ್ನು ಇಂತಹ ಘಟನೆಗಳು ಸಂಭವಿಸದಂತೆ ತಡೆಯಲು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಸ್ಮಾರ್ಟ್‌ಫೋನ್ ಚಾರ್ಜಿಂಗ್, ಚಾರ್ಜರ್, ಬಳಕೆಯ ಸಮಯದಲ್ಲಿ ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು? ಎಂಬುದನ್ನು ಈ ಲೇಖನದಲ್ಲಿ ಓದಿ.
ಕೆಲವರ ಫೋನ್‌ನ ಬ್ಯಾಟರಿ ಬೇಗನೆ ಖಾಲಿಯಾಗುತ್ತೆ ಮತ್ತು ಸಂಪೂರ್ಣವಾಗಿ ಚಾರ್ಜ್ ಮಾಡಿದ ನಂತರವೂ ಬ್ಯಾಟರಿ ಬ್ಯಾಕಪ್ ಸರಿ ಇಲ್ಲ ಎಂದು ಚಿಂತೆ ಮಾಡುತ್ತಿದ್ದೀರಾ? ಹೌದು ಎಂದಾದರೆ, ಹೆಚ್ಚು ಚಿಂತಿಸಬೇಡಿ, ಕೆಲವು ತಪ್ಪುಗಳನ್ನು ಮಾಡೋದನ್ನು ನಿಲ್ಲಿಸಿ. ನಿಮ್ಮ ಫೋನ್‌ನಲ್ಲಿ ದೋಷ ಹುಡುಕುವ ಬದಲು, ನಿಮ್ಮ ಫೋನ್‌ನ ಬ್ಯಾಟರಿಯನ್ನು ಬೇಗನೆ ಖಾಲಿಯಾಗಲು ಕಾರಣ ಏನೆಂದು ತಿಳಿದುಕೊಳ್ಳಿ.
ಸೋಷಿಯಲ್ ಮೀಡಿಯಾ ಆ್ಯಪ್‌ಗಳು: ನಾವೆಲ್ಲರೂ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಸ್ನ್ಯಾಪ್‌ಚಾಟ್‌ನಂತಹ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ಬಳಸುತ್ತೇವೆ. ಇದಲ್ಲದೆ, ಗೂಗಲ್ ಮ್ಯಾಪ್ಸ್ ಸಹ ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಬಳಕೆಯಲ್ಲಿಲ್ಲದಿದ್ದರೂ ಸಹ, ಈ ಎಲ್ಲಾ ಅಪ್ಲಿಕೇಶನ್‌ಗಳು ಫೋನ್‌ನ ಹಿನ್ನೆಲೆಯಲ್ಲಿ ರನ್ ಆಗುತ್ತವೆ ಮತ್ತು ನಿಮ್ಮ ಅನುಮತಿಯಿಲ್ಲದೆಯೇ ಫೋನ್‌ನ ಬ್ಯಾಟರಿಯನ್ನು ಹೀರಿಕೊಳ್ಳುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಫೋನ್ ಸೆಟ್ಟಿಂಗ್‌ಗಳಿಗೆ ಹೋಗಿ, ನಂತರ ಬ್ಯಾಟರಿ, ನಂತರ ಹಿನ್ನೆಲೆ ಆಯ್ಕೆಗೆ ಹೋಗಿ ಅಪ್ಲಿಕೇಶನ್ ರಿಫ್ರೆಶ್ ಮೇಲೆ ಕ್ಲಿಕ್ ಮಾಡಿ ಮತ್ತು ಇಲ್ಲಿ ಅಪ್ಲಿಕೇಶನ್‌ಗಳನ್ನು ಆಫ್ ಮಾಡೋದು ಒಳ್ಳೆಯದು. ಹೀಗೆ ಮಾಡಿದ್ರೆ ಆ್ಯಪ್‌ಗಳು ಆಫ್ ಆಗುತ್ತೆ, ಬ್ಯಾಟರಿ ಬೇಗನೆ ಖಾಲಿಯಾಗಲ್ಲ.
100% ಚಾರ್ಜ್: ಸ್ಮಾರ್ಟ್‌ಫೋನ್‌ಗಳನ್ನು ಚಾರ್ಜ್ ಮಾಡುವ ಜನರು ಹೆಚ್ಚಾಗಿ ತಮ್ಮ ಫೋನ್‌ಗಳನ್ನು ಓವರ್‌ಚಾರ್ಜ್ ಮಾಡುವ ತಪ್ಪನ್ನು ಮಾಡುತ್ತಾರೆ. ಬ್ಯಾಟರಿಯು ಶೇಕಡಾ 100 ರಷ್ಟು ಸಂಪೂರ್ಣವಾಗಿ ಚಾರ್ಜ್ ಆದ ನಂತರವೂ, ನೀವು ಅದನ್ನು ಚಾರ್ಚ್‌ಗೆ ಹಾಕಿದ್ರೆ, ಅದೇ ನೀವು ಮಾಡೋ ದೊಡ್ಡ ತಪ್ಪು. ಸಾಮಾನ್ಯವಾಗಿ, ಫೋನ್ ಶೇಕಡಾ 20 ರಷ್ಟು ಚಾರ್ಜ್ ಆದಾಗ ಚಾರ್ಜ್ ಮಾಡಬೇಕು ಮತ್ತು ಶೇಕಡಾ 80 ರಷ್ಟು ಚಾರ್ಜ್ ಆದ ನಂತರ ತೆಗೆಯಬೇಕು. ಅಂತಹ ಪರಿಸ್ಥಿತಿಯಲ್ಲಿ, ಫೋನ್‌ನ ಬ್ಯಾಟರಿಯನ್ನು ಹಾನಿಯಿಂದ ಉಳಿಸಬಹುದು.
ಬ್ಯಾಟರಿ ಸೇವರ್ ಬಳಸಿ: ಸ್ಮಾರ್ಟ್‌ಫೋನ್ ಬಳಕೆದಾರರು ಬ್ಯಾಟರಿ ಸೇವರ್ ಬಳಸುವುದು ಅಗತ್ಯವೆಂದು ಪರಿಗಣಿಸುವುದಿಲ್ಲ. ಎಲ್ಲೋ ಬ್ಯಾಟರಿ ಖಾಲಿಯಾಗಲು ಇದು ಕಾರಣ. ಫೋನ್‌ನ ಬ್ಯಾಟರಿಯನ್ನು ಉಳಿಸಲು, ಸೆಟ್ಟಿಂಗ್‌ಗಳಲ್ಲಿ ಬ್ಯಾಟರಿ ಸೇವರ್ ಮೋಡ್ ಇದೆ. ಅದನ್ನು ಆನ್ ಮಾಡುವುದರಿಂದ ಬ್ಯಾಟರಿ ಬೇಗನೆ ಖಾಲಿಯಾಗುವುದಿಲ್ಲ. ಅಲ್ಲದೆ, ಈ ಮೋಡ್‌ನಲ್ಲಿ ಫೋನ್ ಅನ್ನು ಚಾರ್ಜ್ ಮಾಡಬಾರದು ಎಂಬುದನ್ನು ನೆನಪಿಡಿ, ಇಲ್ಲದಿದ್ದರೆ ಬ್ಯಾಟರಿಯು ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತದೆ ಮತ್ತು ಹಾನಿಗೊಳಗಾಗಬಹುದು.
ವೈಬ್ರೇಷನ್ ಮೋಡ್ ಆನ್: ಫೋನ್ ಅನ್ನು ರಿಂಗ್ ಅಥವಾ ವೈಬ್ರೇಷನ್ ಮೋಡ್‌ನಲ್ಲಿ ಇಡುವುದರಿಂದ ಏನೂ ಪ್ರಯೋಜನವಿಲ್ಲ ಎಂದು ನೀವು ಭಾವಿಸಿದರೆ, ಅದು ನಿಮ್ಮ ದೊಡ್ಡ ತಪ್ಪು. ನಿಮ್ಮ ಸ್ಮಾರ್ಟ್‌ಫೋನ್‌ನ ನೋಟಿಫಿಕೇಶನ್ ಅಥವಾ ಕಾಲ್ ರಿಂಗ್ ಅನ್ನು ವೈಬ್ರೇಶನ್ ಮೋಡ್‌ನಲ್ಲಿ ಇಡುವುದರಿಂದ ಬ್ಯಾಟರಿ ಬೇಗನೆ ಖಾಲಿಯಾಗುತ್ತದೆ. ವೈಬ್ರೇಶನ್ ಮೋಡ್ ಬ್ಯಾಟರಿಯನ್ನು ಬೇಗನೆ ಖಾಲಿ ಮಾಡುತ್ತದೆ ಮತ್ತು ಬ್ಯಾಟರಿಯ ಗುಣಮಟ್ಟ ಕೂಡಾ ಕಡಿಮೆಯಾಗುತ್ತದೆ.
ಬ್ಯಾಟರಿ ಬೇಗ ಖಾಲಿಯಾಗಲು ಡಿಸ್ಪ್ಲೇ ಕಾರಣ: ಬ್ಯಾಟರಿ ಬೇಗ ಖಾಲಿಯಾಗಲು ಒಂದು ಕಾರಣವೆಂದರೆ ಡಿಸ್ಪ್ಲೇ. ನೀವು ಡಿಸ್ಪ್ಲೇಗೆ ಲೈವ್ ವಾಲ್‌ಪೇಪರ್ ಅನ್ನು ಅಪ್ಲೈ ಮಾಡಿದ್ರೆ ಅಥವಾ ಡಿಸ್‌ಪ್ಲೇ ಯಾವಾಗಲೂ ಆನ್‌ನಲ್ಲಿಯೇ ಬಿಟ್ಟರೆ, ಬ್ಯಾಟರಿ ಬೇಗನೆ ಖಾಲಿಯಾಗಬಹುದು. ಯಾವಾಗಲೂ ಡಿಸ್ಪ್ಲೇ ಮೋಡ್ ಆನ್ ಆಗಿದ್ದರೆ ನಿಮ್ಮ ಫೋನ್‌ನ ಬ್ಯಾಟರಿ ಬೇಗನೆ ಖಾಲಿಯಾಗುತ್ತದೆ.





