HEALTH TIPS

AI ಸುದ್ದಿಗಳಿಗೆ ಹೆಚ್ಚಿದೆ ಬೇಡಿಕೆ: ಟಿವಿ, ಪತ್ರಿಕೆಗೆ ಶಾಕ್

ವಿಶ್ವದಲ್ಲಿ ದಿನವೂ ಹೊಸ ಹೊಸ ತಂತ್ರಜ್ಞಾನಕ್ಕೆ ಜನ ಹೊಂದಿಕೊಳ್ಳುತ್ತಿದ್ದಾರೆ. ಈಗಂತೂ AI ಜನರ ಜೀವನದಲ್ಲಿ ಹಾಸು ಹೊಕ್ಕಿದೆ. ಅಂದು ಜನರು ಸುದ್ದಿಗಳಿಗಾಗಿ ಟಿವಿ, ರೆಡಿಯೊ, ಪತ್ರಿಕೆ, ವೆಬ್‌ ಸೈಟ್‌ಗಳ ಮೊರೆ ಹೋಗುತ್ತಿದ್ದರು. ಆದರೆ ಈಗ ಸಾಮಾಜಿಕ ಮಾಧ್ಯಮಗಳತ್ತ ಮುಖ ಮಾಡಿದ್ದಾರೆ.

ರಾಯಿಟರ್ಸ್ ಇನ್‌ಸ್ಟಿಟ್ಯೂಟ್ ಫಾರ್ ದಿ ಸ್ಟಡಿ ಆಫ್ ಜರ್ನಲಿಸಂನ ಡಿಜಿಟಲ್ ನ್ಯೂಸ್ ರಿಪೋರ್ಟ್‌ ಈ ಬಗ್ಗೆ ಹೊಸ ಅಧ್ಯಯನ ನಡೆಸಿದೆ.

ವಿಶ್ವದಲ್ಲಿ ಸಾಮಾಜಿಕ ತಾಣದ ಬಳಕೆ ಹೆಚ್ಚಗಿದ್ದರಿಂದ ಜನ ಪತ್ರಿಕೆ ಹಾಗೂ ಟಿವಿಗಳನ್ನು ನೋಡುವ ಸಂಖ್ಯೆ ಕಡಿಮೆ ಆಗಿದೆ ಎಂದು ವರದಿ ತಿಳಸಿದೆ. ಭಾರತ ಸೇರಿದಂತೆ 48 ದೇಶಗಳಲ್ಲಿ 1 ಲಕ್ಷ ಸುದ್ದಿ ಗ್ರಾಹಕರ ವಾರ್ಷಿಕ ಸಮೀಕ್ಷೆಯನ್ನು ಆಧರಿಸಿ ಈ ವರದಿಯನ್ನು ಮಾಡಲಾಗಿದೆ. ಜನ ಸುದ್ದಿಯಿಂದ ದೂರ ಸರಿಯುತ್ತಿದ್ದು, ಇಂಗ್ಲಿಂಷ್ ಮಾತನಾಡುವ, ಅಂತರ್ಜಾಲ ಬಳೆಸುವ ಭಾರತೀಯರು ಬೇರೆ ಪ್ಲಾಟ್ ಫಾರ್ಮ್‌ಗಳ ಮೊರೆ ಹೋಗಿದ್ದಾರೆ. ಪಾಡ್‌ಕ್ಯಾಸ್ಟರ್ ಹೆಚ್ಚು ಖ್ಯಾತಿಯನ್ನು ಪಡೆಯುತ್ತಿದ್ದು, 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಐದನೇ ಒಂದು ಭಾಗದಷ್ಟು ಜನರನ್ನು ಇದು ಆಕರ್ಷಿಸಿದೆ.

ಭಾರತದಲ್ಲಿ ಹೆಚ್ಚುತ್ತಿದೆ ಎಐ ಸಂಸ್ಕೃತಿ

ಫಿಲಿಫೈನ್ಸ್‌, ಥೈಲೆಂಡ್‌, ಕೀನ್ಯಾ, ಭಾರತದಲ್ಲಿನ ಜನ ಸುದ್ದಿಗಳನ್ನು ಓದುವುದಕ್ಕಿಂತ ಹೆಚ್ಚಾಗಿ ನೋಡಲು ಇಷ್ಟ ಪಡುತ್ತಾರೆ. ಇನ್ನು ಜನರು ವ್ಯಕ್ತಿತ್ವ ಆಧಾರಿತ ಸುದ್ದಿಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿದು ಬಂದಿದೆ. ಇನ್ನು 18 ರಿಂದ 34 ವರ್ಷದ ಒಳಗಿನ ಯುವಕರು ಸುದ್ದಿಗಳನ್ನು ಪತ್ರಿಕೆ, ಟಿವಿಗಳಲ್ಲಿ ನೋಡುವ ಬದಲು ಸಾಮಾಜಿಕ ತಾಣಗಳ ಮೇಲೆ ಹೆಚ್ಚಿನ ಅವಲಂಬಿತರಾಗಿದ್ದಾರೆ ಎಂದು ವರದಿ ತಿಳಿಸಿದೆ. ಈ ವಯೋಮಿತಿಯ ಶೇಕಡಾ 24ರಷ್ಟು ಜನರು ಮಾತ್ರ ಸುದ್ದಿಗಳನ್ನು ವೆಬ್‌ಸೈಟ್‌ಗಳ ಮೂಲಕ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

AI ಮತ್ತು ಪಾಡ್‌ಕಾಸ್ಟ್‌ಗಳತ್ತ ಭಾರತೀಯರ ಒಲವು

ಭಾರತದಲ್ಲಿ ಯೂಟ್ಯೂಬ್‌ ಶೋಗಳ ಸಂಖ್ಯೆ ದಿನೇ ದಿನೇ ಏರಿಕೆ ಆಗುತ್ತಿದೆ. ಅಲ್ಲದೆ ಈ ವೇಳೆ ಟಾಕ್‌ ಶೋಗಳನ್ನು ಜನ ಹೆಚ್ಚಾಗಿ ನೋಡುತ್ತಿದ್ದಾರೆ. ಈ ವೇಳೆ ನೋಡುಗರು ಮೋದಿ ಸರ್ಕಾರವನ್ನು ಟೀಕಿಸುವ ಹಾಗೂ ಬೆಂಬಲಿಸುವ ವಿಡಿಯೋಗಳನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆಿ. ಭಾರತದಲ್ಲಿ ಖ್ಯಾತ ನಾಮ ಟಿವಿ ನಿರೂಪಕರು ಸಹ ಯುಟ್ಯೂಬ್‌ ಆರಂಭಿಸಿದ್ದು ಸಖತ್ ವೈರಲ್‌ ಸುದ್ದಿಗಳನ್ನು ಅಪ್‌ ಲೋಡ್ ಮಾಡ್ತಾರೆ. ಎನ್‌ಡಿಟಿವಿಯಲ್ಲಿ ಈ ಹಿಂದೆ ನಿರೂಪಕರಾಗಿ ಕೆಲಸ ಮಾಡಿದ್ದ ರವೀಶ್ ಕುಮಾರ್ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಅಭಿಮಾನಿಗಳಿಗೆ ಇನ್ನು ಹತ್ತಿರವಾಗಿದ್ದಾರೆ. ಇವರಿಗೆ 12 ಮಿಲಿಯನ್ ಫಾಲೋವರ್ಸ್‌ ಇದ್ದಾರೆ. ಇನ್ನು ಶಿಕ್ಷಣ, ಸಾಮಾಜಿಕ, ರಾಜಕೀಯ ಸುದ್ದಿಗಳನ್ನು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿತ್ತರಿಸುವ ಧ್ರುವ್ ರಾಠೆ 25 ಹಿಂಬಾಲಕರನ್ನು ಹೊಂದಿದ್ದಾರೆ.

ಭಾರತದಲ್ಲಿ ಮೆಸೇಜಿಂಗ್ ಆಂಪ್‌ಗಳಿಗೆ ದೊಡ್ಡ ಮಾರುಕಟ್ಟೆ ಇದೆ. ಈ ಆಪ್‌ಗಳಲ್ಲಿ ಬರುವ ವಿಡಿಯೋಗಳು ಹಾಗೂ ನಕಲಿ ಸುದ್ದಿಗಳು ಘರ್ಷಣೆಗೆ ಪ್ರಚೋದನೆ ನೀಡುತ್ತವೆ. ಹತ್ತರಲ್ಲಿ ಒಬ್ಬ ವ್ಯಕ್ತಿ ಇಂತಹ ಸುದ್ದಿಗಳನ್ನು ಹರಡುವಲ್ಲಿ ತನ್ನ ಪಾತ್ರವನ್ನು ವಹಿಸುತ್ತಾನೆ ಎಂದು ವರದಿ ತಿಳಿಸಿದೆ.

ಸುದ್ದಿಗಳಿಗೆ ಸಂಬಂಧಿಸಿದಂತೆ ಜನ ಪ್ರಮುಖ ನ್ಯೂಸ್‌ ವೆಬ್‌ಸೈಟ್‌ ನೋಡುವ ಸಂಖ್ಯೆ ಕಡಿಮೆ ಆಗಿದೆ. ಈ ಜನರು ಆರ್ಟಿಫಿಸಿಯಲ್‌ ಇಂಟ್ಲಿಜನ್ಸ್‌ (AI) ಬಳಸಿ ತಮಗೆ ಬೇಕಾದ ಸುದ್ದಿಯನ್ನು ಸರಳಿ ಕರಿಸಿ ಓದುತ್ತಾರೆ. ಭಾರತದಲ್ಲಿ ಇದರ ಬಳಿಕ ದಿನೇ ದಿನೇ ಹೆಚ್ಚುತ್ತಿದೆ. ಐದರಲ್ಲಿ ಒಬ್ಬರು ವಾರದ ಪ್ರಮುಖ ಸುದ್ದಿಗಳನ್ನು ನೋಡಿ ಚಾಟ್‌ ಬೂಟ್ಸ್‌ನಂತಹ ಪ್ರಮುಖ ವೇದಿಕೆಯ ಮೊರೆ ಹೋಗುತ್ತಿದ್ದಾರೆ ಎಂದು ವರದಿ ತಿಳಿಸಿದೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries