ಅಹಮದಾಬಾದ್ ವಿಮಾನ ದುರಂತವು ಎಲ್ಲರನ್ನು ಆಘಾತಕ್ಕೆ ತಳ್ಳಿದೆ. ಅದರಲ್ಲೂ ಹಲವರು ಈ ಘಟನೆಯಿಂದ ಅಕ್ಷರಶಃ ಕುಗ್ಗಿದ್ದಾರೆ. ಭಾರತದಲ್ಲಿ ದಶಕಗಳ ಬಳಿಕ ಸಂಭವಿಸಿದ ಅತ್ಯಂತ ದೊಡ್ಡ ಹಾಗೂ ಘೋರ ದುರಂತವಿದು ಎನ್ನಬಹುದು. ಹಾಗೆ ಈ ಘಟನೆಗೆ ಕಾರಣವಾಗಿರುವ ಅಂಶಗಳ ಕುರಿತು ಈಗ ಚರ್ಚೆ ಆರಂಭಗೊಂಡಿದೆ.
ದುರಂತವು ಕೇವಲ ನಿಮಿಷದೊಳಗೆ ಸಂಭವಿಸಲು ಕಾರಣವಾದ ಅಂಶವೇನು? ಇದಕ್ಕೆ ಕಾರಣವೇನು? ಎಂಬ ಕುರಿತಾದ ತನಿಖೆ ಆರಂಭಗೊಂಡಿದೆ. ಇನ್ನು ಇದಕ್ಕೆ ಉತ್ತರ ಸಿಗಬೇಕಾದರೆ ವಿಮಾನದಲ್ಲಿದ್ದ ಬ್ಲಾಕ್ ಬಾಕ್ಸ್ ಪರಿಶೀಲನೆ ನಡೆಯಬೇಕಿದೆ. ಬಹುತೇಕ ವಿಮಾನ ದುರಂತಗಳು ಏಕೆ ಸಂಭವಿಸಿದೆ ಎಂಬುದು ಪ್ರಾಥಮಿಕ ತನುಖೆಯಲ್ಲೂ ತಿಳಿಯುವುದಿಲ್ಲ, ಆದ್ರೆ ಬ್ಲಾಕ್ ಬಾಕ್ಸ್‌ನ ಮೂಲಕ ಅರಿಯಬಹುದು.
ಏನಿದು ಬ್ಲಾಕ್ ಬಾಕ್ಸ್?
1953 ರಲ್ಲಿ ಆಸ್ಟ್ರೇಲಿಯಾದ ವಿಜ್ಞಾನಿ ಡೇವಿಡ್ ವಾರೆನ್ ಕಾಕ್‌ಪಿಟ್ ಧ್ವನಿ ರೆಕಾರ್ಡರ್ ಎಂಬ ಪರಿಕಲ್ಪನೆಯನ್ನು ಮೊದಲ ಬಾರಿಗೆ ಹೊರತಂದರು. 1953ರಲ್ಲಿ ನಡೆದಿದ್ದ ವಿಮಾನ ದುರಂತದ ತನಿಖೆಯ ಸಮುಯದಲ್ಲಿ ಕಾಕ್‌ಪಿಟ್‌ನಲ್ಲಿ ನಡೆಯುವ ಸಂಹವನವನ್ನು ರೆಕಾರ್ಡ್ ಮಾಡಲು ಒಂದು ಸಾಧನ ಇದ್ದಿದ್ದರೆ ತನಿಖೆ ಸುಲಭವಾಗುತ್ತಿತ್ತು ಎಂದು ಅಭಿಪ್ರಾಯಕ್ಕೆ ಬಂದರು.
ಇದಾದ ಬಳಿಕ 1956ರಲ್ಲಿ ಒಂದು ಮಾದರಿ ತಯಾರಿಸಲಾಗಿತ್ತು, ಇದರಲ್ಲಿ ಸಾಮಾನ್ಯ ಧ್ವನಿ ಗ್ರಹಿಸಲು ಏನೆಲ್ಲಾ ವಸ್ತುಗಳು ಹಾಗೂ ಅದನ್ನು ರೆಕಾರ್ಡ್ ಮಾಡಿ ಇಡಲು ಬೇಕಾದ ತಂತ್ರಜ್ಞಾನವಿತ್ತು. ನಂತರ ಈ ಸಾಧನವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗಿತ್ತು, ಅದರಲ್ಲೂ ಈ ಬ್ಲಾಕ್ ಬಾಕ್ಸ್ ವಿಮಾನ ಸುಟ್ಟುಹೋದರು ಬಾಕ್ಸ್‌ಗೆ ಹಾನಿಯಾಗುವುದಿಲ್ಲ.
ಬ್ಲಾಕ್ ಬಾಕ್ಸ್ ಕಾರ್ಯವೇನು?
ವಿಮಾನದಲ್ಲಿರುವ ಬ್ಲಾಕ್ ಬಾಕ್ಸ್ ಇಡೀ ವಿಮಾನದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬ ಮಾಹಿತಿಯನ್ನು ಸಂಗ್ರಹಿಸುತ್ತದೆ. ವಿಮಾನದ ವೇಗ, ಎಷ್ಟು ಎತ್ತರದಲ್ಲಿ ಹಾರಾಟ ನಡೆಯುತ್ತಿದೆ, ಎಂಜಿನ್ ಯಾವ ರೀತಿ ಕಾರ್ಯ ನಿರ್ವಹಿಸುತ್ತಿದೆ. ಎಲ್ಲಿ ಹಾರಾಡುತ್ತಿದೆ. ಸಿಗ್ನಲ್ ಮಾಹಿತಿ, ಕಾಕ್‌ಪಿಟ್‌ನಲ್ಲಿ ನಡೆಯುತ್ತಿರುವ ಸಂಭಾಷಣೆ, ಗಾಳಿ ವೇಗ ಹೀಗೆ ಹಲವು ಮಾಹಿತಿಯನ್ನು ಇದು ಸಂಗ್ರಹಿಸಲಿದೆ. ಹೀಗಾಗಿ ವಿಮಾನದ ಕೊನೆಯ ಘಳಿಗೆಯ ವರೆಗೂ ಅಲ್ಲಿ ಏನೆಲ್ಲಾ ನಡೆದಿದೆ ಎಂಬುದನ್ನು ಇದು ರೆಕಾರ್ಡ್ ಮಾಡಲಿದೆ. ಇದರಿಂದ ತನಿಖೆ ಬಹಳ ಸುಲಭವಾಗುತ್ತದೆ.
ಬ್ಲಾಕ್ ಬಾಕ್ಸ್ ಕಪ್ಪು ಬಣ್ಣದಲ್ಲಿರುವುದಿಲ್ಲ
ಹೌದು ಬ್ಲಾಕ್ ಬಾಕ್ಸ್ ಅಂದ ತಕ್ಷಣ ಅದು ಕಪ್ಪು ಬಣ್ಣದಲ್ಲಿರಬೇಕು ಎಂಬುದಿಲ್ಲ. ಈ ಬಾಕ್ಸ್ ಸಾಮಾನ್ಯವಾಗಿ ಕಿತ್ತಳೆ ಬಣ್ಣದಲ್ಲಿರಲಿದೆ. ಏಕೆಂದರೆ ಸಮುದ್ರದ ಆಳದಲ್ಲೂ ಇದು ಸುಲಭವಾಗಿ ಗುರುತಿಸುವ ಉದ್ದೇಶವಾಗಿ ಕಿತ್ತಳೆ ಬಣ್ಣೆದಲ್ಲಿರಲಿದೆ. ಆದ್ರೆ ಬ್ಲಾಕ್ ಬಾಕ್ಸ್ ಎಂದು ಹೆಸರು ನೀಡಲಾಗುತ್ತದೆ. ಈ ಬಾಕ್ಸ್ ಸಾಮಾನ್ಯವಾಗಿ ಹಾನಿಗೊಳಗಾಗುವುದಿಲ್ಲ. ಸಮುದ್ರದ ಆಳದಲ್ಲಿ ಇದ್ದರೂ ಸುಮಾರು 14 ಸಾವಿರ ಅಡಿಗಳಿಂದಲೂ ಸಂಕೇತ ರವಾನಿಸಲಿದೆ. ಅದರ ಒಳಗಿನ ಚಿಪ್‌ಗಳನ್ನು ನೀರಿನಲ್ಲಿ ಹಾಕಿದರೂ ಬಳಿ ಒಣಗಿಸಿ ಅದರಿಂದ ದತ್ತಾಂಶಗಳ ಪಡೆಯಬಹುದು. ಏಕೆಂದರೆ ಈ ಬಾಕ್ಸ್ ಟೈಟಾನಿಯಂ ಹಾಗೆ ಸ್ಟೈನ್‌ಲೆಸ್ ಸ್ಟೀಲ್‌ನಿಂದ ಮಾಡಲಾಗುತ್ತದೆ. ಇದು ವಿಮಾನದ ಅತ್ಯಂತ ಸದೃಢ ಹಾಗೂ ಹಾನಿಗೊಳಗಾಗದ ವಸ್ತು ಆಗಿರಲಿದೆ. ಹಾಗೆ ಬಹುತೇಕ ವಿಮಾನ ದುರಂತ ಪ್ರಕರಣಗಳನ್ನು ಈ ಬ್ಲಾಕ್ ಬಾಕ್ಸ್ ತನಿಖೆಯ ನೆರವಿಗೆ ಬಂದಿದೆ.
ಸದ್ಯ ಈಗ ಅಪಘಾತಕ್ಕೊಳಗಾದ ಏರ್ ಇಂಡಿಯಾ ವಿಮಾನದ ದತ್ತಾಂಶಗಳನ್ನು ದೆಹಲಿಗೆ ಕಳುಹಿಸಲಾಗಿದೆ. ಅಲ್ಲಿನ ಅತ್ಯಾಧುನಿಕ ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಪ್ರಯೋಗಾಲಯದಲ್ಲಿ ದತ್ತಾಂಶ ವಿಶ್ಲೇಷಣೆ ನಡೆಯಲಿದೆ. ಇದು ಅಪಘಾತಕ್ಕೆ ಕಾರಣವಾದ ಅಂಶಗಳ ಕುರಿತ ಸಂಪೂರ್ಣ ವಿಶ್ಲೇಷಣೆ ಪಡೆಯಲು ನೆರವಾಗಲಿದೆ.






