ಟೆಲ್ ಅವೀವ್: ನಾಲ್ಕು ದಿನಗಳ ಹಿಂದಷ್ಟೇ ಇರಾನ್‌ನ ಭದ್ರತಾ ಪಡೆಯ ನೇತೃತ್ವ ವಹಿಸಿಕೊಂಡಿದ್ದ ಜನರಲ್ ಅಲಿ ಶದ್ಮಾನಿ ಅವರನ್ನು ಮಧ್ಯ ಟೆಹ್ರಾನ್‌ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಹೇಳಿದೆ.
ಐಆರ್‌ಜಿಸಿಯ (ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್) ಖತಮ್-ಅಲ್ ಅನ್ಬಿಯಾ ಕೇಂದ್ರದ ಪ್ರಧಾನ ಕಚೇರಿಯ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಕಮಾಂಡರ್ ಶದ್ಮಾನಿ ಹತ್ಯೆಯಾಗಿದ್ದಾರೆ ಎಂದು ಅದು ತಿಳಿಸಿದೆ. ಆದರೆ, ಶದ್ಮಾನಿ ಹತ್ಯೆ ಬಗ್ಗೆ ಇರಾನ್ ತಕ್ಷಣ ಪ್ರತಿಕ್ರಿಯಿಸಿಲ್ಲ.
ಐಆರ್‌ಜಿಸಿಯ ಕಮಾಂಡರ್ ಆಗಿದ್ದ ಮೇಜರ್ ಜನರಲ್ ಘೋಲಮ್ ಅಲಿ ರಶೀದ್ ಅವರು ಜೂನ್ 13ರಂದು ನಡೆದ ವೈಮಾನಿಕ ದಾಳಿಯಲ್ಲಿ ಹತ್ಯೆಯಾಗಿದ್ದರು. ಆ ಸ್ಥಾನಕ್ಕೆ ಶದ್ಮಾನಿ ಅವರನ್ನು ನೇಮಿಸಲಾಗಿತ್ತು.




