ಕಾಸರಗೋಡು: ಉತ್ತಮ ಸಂಸ್ಕಾರಕ್ಕಾಗಿ ಪಠ್ಯದ ಜತೆಗೆ ಉತ್ತಮ ಪುಸ್ತಕಗಳ ಓದುವಿಕೆ ಅನಿವಾರ್ಯ ಎಂಬುದಾಗಿ ಡಾ. ಕೆ.ಎನ್ ವೆಂಕಟ್ರಮಣ ಹೊಳ್ಳ ತಿಳಿಸಿದ್ದಾರೆ.
ಅವರು ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ದಲ್ಲಿ, ನಗರದ ಭಾಲ ಭವನ ವಿದ್ಯಾ ಕೇಂದ್ರ ಹಾಗೂ ಶ್ರೀ ವೆಂಕಟ್ರಮಣ ಕೃಪಾಶ್ರಿತ ಯಕ್ಷಗಾನ, ಅಧ್ಯಯನ, ಸಂಶೋಧನ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ನಡೆದ ವಾಚನಾ ವಾರಾಚರಣೆ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭವನ ಗ್ರಂಥಾಲದ ಸ್ಥಾಪಕ ಡಾ. ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದರು. ನಗರದ ಬಿ. ಇ. ಎಂ ಹೈಯರ್ ಸೆಕೆಂಡರಿ ಪ್ರಾಂಶುಪಾಲರಾದ ರಾಜೇಶ್ ಚಂದ್ರ ಕೆ. ಪಿ., ಪತ್ರಕರ್ತ ಜಗನ್ನಾಥ್ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಬಾಲಭವನ ಮುಖ್ಯ ಶಿಕ್ಷಕಿ ಲೀಲಾವತಿ ನಾಯರ್, ಅದ್ಯಾಪಿಕೆ ಜಯಂತಿ, ಜಯಾನಂದ ಕುಮಾರ್ ಹೊಸದುರ್ಗ, ಪತ್ರಕರ್ತ ಜಯ ಮಣಿಯಂಪಾರೆ, ಪತ್ರಕರ್ತ ಪ್ರದೀಪ್ ಬೇಕಲ್, ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ತರಗತಿ ನಡೆಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿ ಜಯಂತಿ ಅವರನ್ನು ಕನ್ನಡ ಭವನದ ವತಿಯಿಂದ ಡಾ. ವಾಮನ್ ರಾವ್ ಬೇಕಲ್-ಸಂದ್ಯಾ ರಾಣಿ ಟೀಚರ್ ಅಭಿನಂದಿಸಿ ಗೌರವಿಸಿದರು. ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಕನ್ನಡ ಭವನ ಸಾರ್ವಜನಿಕ ವಾಚನಾಲಯ ಸಂಚಾಲಕಿ ಸಂಧ್ಯಾ ರಾಣಿ ಟೀಚರ್, ಸ್ವಾಗತಿಸಿದರು. ಕನ್ನಡ ಭವನ ಕಾರ್ಯದರ್ಶಿ ವಸಂತ್ ಕೆರೆಮನೆ ವಂದಿಸಿದರು.


