ಕಾಸರಗೋಡು: ದೋಣಿಯಲ್ಲಿ ಮೀನು ಹಿಡಿಯುವ ಮಧ್ಯೆ, ಆಯತಪ್ಪಿ ನೀರಿಗೆ ಬಿದ್ದ ಮೀನು ಕಾರ್ಮಿಕ ಮೃತಪಟ್ಟಿದ್ದಾರೆ. ಪಡನ್ನ ವಡಕ್ಕೇಪುರ ನಿವಾಸಿ ದಿವಾಕರನ್(63)ಮೃತಪಟ್ಟವರು. ಓರಿ ಪುಲ್ಲೂರ್‍ಮಾಡ್ ಹೊಳೆಯಲ್ಲಿ ಮೀನು ಹಿಡಿಯುವ ಮಧ್ಯೆ ಭಾನುವಾರ ಬೆಳಗ್ಗೆ ನೀರಿಗೆ ಬಿದ್ದಿದ್ದರು. ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳದ ಸಹಾಯದೊಂದಿಗೆ ಹುಡುಕಾಟ ನಡೆಸಿದ್ದು, ಸಂಜೆಯ ವೇಳೆ ಮೃತದೇಹ ಪತ್ತೆಯಾಗಿದೆ. ಮೃತದೇಹ ಕಾಞಂಗಾಡು ಜಿಲ್ಲಾಸ್ಪತ್ರೆ ಶವಾಗಾರ ತಲುಪಿಸಲಾಗಿದೆ.

