ಕಾಸರಗೋಡು: ಹಡಗು ಉದ್ಯೋಗಿಯಾಗಿದ್ದು, ಕರ್ತವ್ಯದ ಮಧ್ಯೆ ಮೃತಪಟ್ಟಿರುವ ಉದುಮ ಪಾಕ್ಯಾರ ನಿವಾಸಿ, ಮರ್ಚಂಟ್‍ನೇವಿ ನಿವೃತ್ತ ಉದ್ಯೋಗಿ ದಿ. ಕೃಷ್ಣನ್-ಸರೋಜಿನಿ ದಂಪತಿ ಪುತ್ರ ಪ್ರಶಾಂತ್(39) ಮೃತದೇಹ ಜೂ. 30ರಂದು ಊರಿಗೆ ತಲುಪಲಿದೆ. ಹಡಗು ಕಂಪೆನಿ ಪ್ರತಿನಿಧಿಗಳೂ ಜತೆಯಲ್ಲಿರಲಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ.
ಜಪಾನ್‍ನಿಂದ ಅಮೆರಿಕಾ ಬಂದರಿಗೆ ತೆರಳುತ್ತಿದ್ದ ತೈಲ ಸಾಗಾಟದ ವಿಲಿಯಂಸ್ ಕಂಪೆನಿಯ 'ತೈಬೇಕ್ ಎಕ್ಸ್‍ಪ್ಲೋರರ್'ಎಂಬ ಹಡಗಿನಲ್ಲಿ ಉದ್ಯೋಗಿಯಾಗಿದ್ದ ಪ್ರಶಾಂತ್ ಮೃತದೇಹ ಮೇ 14ರಂದು ಹಡಗಿನೊಳಗೆ ಕಂಡುಬಂದಿತ್ತು. ಮೃತದೇಹವನ್ನು ಹವಾಯಿಯ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದ್ದು, ಜೂ. 30ರಂದು ಮುಂಬಯಿ ಮಾರ್ಗವಾಗಿ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದು, ಅಲ್ಲಿಂದ ರಸ್ತೆ ಹಾದಿಯಾಗಿ ಪಾಕ್ಯಾರಂನ ಮನೆಗೆ ತಲುಪಲಿದೆ.
ಪ್ರಶಾಂತ್ ಸಾವನ್ನಪ್ಪುವ ಒಂದು ತಿಂಗಳ ಹಿಂದೆಯಷ್ಟೆ ಹಡಗಿನಲ್ಲಿ ಕೆಲಸಕ್ಕೆ ಸೇರ್ಪಡೆಗೊಂಡಿದ್ದರು.

