HEALTH TIPS

ಮಂಜೇಶ್ವರದ ಸಿಎನ್.ಜಿ ರಿಕ್ಷಾ ಚಾಲಕರಿಗಿಲ್ಲ ಸಿಎನ್.ಜಿ ಪಂಪುಗಳು

ಮಂಜೇಶ್ವರ: ಪರಿಸರ ಸ್ನೇಹಿ ವಾಹನಗಳು ರಸ್ತೆಗೆ ಇಳಿದು ವಾಯು ಮಾಲಿನ್ಯವನ್ನು ತಡೆಗಟ್ಟುವ ಸಂದರ್ಭದಲ್ಲಿ  ಸಮಸ್ಯೆಗಳು ಒಂದಲ್ಲ ಒಂದು ರೀತಿಯಲ್ಲಿ ಬಿಗಡಾಯಿಸುತ್ತಿದೆ.

ಮಂಜೇಶ್ವರ ಭಾಗದ ಹೊಸಂಗಡಿ ಉಪ್ಪಳ, ಬಾಯಾರು, ಮೀಯಪದವು ಹೀಗೆ ಹಲವಾರು ಕಡೆಗಳಲ್ಲಿ  ಸಿಎನ್.ಜಿ ರಿಕ್ಷಾಗಳು ಬಾಡಿಗೆಗಾಗಿ ಕಾರ್ಯನಿರ್ವಹಿಸುತ್ತಿವೆ. ಉಳಿದ ರಿಕ್ಷಾಗಳಿಗೆ ಬೇಕಾದ ಪೆಟ್ರೋಲಿಯಂ ಹಾಗೂ ಡೀಸೆಲ್ ಗಳು ಪೆಟ್ರೋಲ್ ಪಂಪ್ ಗಳಲ್ಲಿ ಲಭಿಸುತ್ತದೆ. ಆದರೆ ಸಿಎನ್.ಜಿ ತುಂಬಿಸಬೇಕಾದರೆ ಈ ರಿಕ್ಷಾಗಳು ತಲಪಾಡಿ, ಕಾಸರಗೋಡು ಅಥವ ಕರ್ನಾಟಕದ ಬೋಳಿಯಾರ್ ಭಾಗಕ್ಕೆ ತಲುಪಬೇಕು. 

ಅಲ್ಲಿಗೆ ತೆರಳಿದರೂ ಕೆಲವೊಮ್ಮೆ ನಾಲ್ಕೈದು ತಾಸು ಕಾಯಬೇಕಾದ ಸಂದರ್ಭವೂ ಉಂಟು. ಹಲವಾರು ಬಾರಿ ಸಿಎನ್.ಜಿ ಕೊರತೆಯಿಂದ ವಾಹನವನ್ನು ಚಲಾಯಿಸದೆ ಮನೆಯಲ್ಲಿ ಇಡಬೇಕಾದ ಪರಿಸ್ಥಿತಿ ರಿಕ್ಷಾ ಚಾಲಕರದ್ದು.

ಮಂಜೇಶ್ವರ ಭಾಗದಲ್ಲಿ ಸಾವಿರಕ್ಕಿಂತಲೂ ಅಧಿಕ ಸಿಎನ್.ಜಿ ರಿಕ್ಷಾಗಳಿದ್ದು ಅದಕ್ಕೆ ಬೇಕಾದ ಸಿಎನ್.ಜಿ ಮಾತ್ರ ಕೈಗೆಟಕುವ ದೂರದಲ್ಲಿ ಸಿಕ್ಕಿದರೆ ಕಷ್ಟ ಪಟ್ಟು  ದುಡಿಯುವ ರಿಕ್ಷಾದವರಿಗೆ ಅನುಕೂಲ. ಹಲವಾರು ಪೆಟ್ರೋಲಿಯಂ ಪಂಪ್ ಗಳು ಈ ಭಾಗದಲ್ಲಿ ಕಾರ್ಯನಿರ್ವಹಿಸುತ್ತಾ ಇದ್ದು ಸಿಎನ್ ಜಿ ಕೇಂದ್ರಗಳು ಈ ಭಾಗದಲ್ಲಿ ಅಗತ್ಯವಾಗಿ ಕಾರ್ಯನಿರ್ವಹಿಸ ಬೇಕಾಗಿದೆ ಎಂದು ರಿಕ್ಷಾಚಾಲಕರು ತಮ್ಮ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ. ಮಂಜೇಶ್ವರ ಭಾಗಕ್ಕೆ ತಲಪಾಡಿ ಮತ್ತು ಬೋಳಿಯಾರ್ ತುಂಬಾ ದೂರವಿದ್ದು ಅದು ಕರ್ನಾಟಕ ಭಾಗಕ್ಕೆ ಸೇರಿದೆ. ಒಂದು ವೇಳೆ ಸಿಎನ್ ಜಿ ತುಂಬಿಸಲು ಆ ಭಾಗಕ್ಕೆ ಹೋದರೆ ಪೆÇೀಲೀಸರಿಂದ ಫೈನ್ ಪಡೆಯುವ ಸಂದರ್ಭದಿಂದ ಸಿಎನ್ ಜಿ ರಿಕ್ಷಾ ಚಾಲಕರು ದಿನನಿತ್ಯ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ರಾತ್ರಿ ಹೊತ್ತು ತುರ್ತು ಸಂದರ್ಭದಲ್ಲಿ ಅರ್ಧ ದಾರಿಯಲ್ಲಿ ಬಾಕಿಯಾದ ಪ್ರಸಂಗ, ಅದರಿಂದ ಉಂಟಾದ ತೊಂದರೆಗಳನ್ನು ರಿಕ್ಷಾಚಾಲಕರು ಮುಂದಿಡುತ್ತಾರೆ. 

ಮಂಜೇಶ್ವರ ಭಾಗದ ಹೊಸಂಗಡಿ, ಬಾಯಾರು, ಮುರತ್ತಣೆ, ಉಪ್ಪಳ ಭಾಗದಲ್ಲಿ ಸಿಎನ್ ಜಿ ಕೇಂದ್ರಗಳು ಅಗತ್ಯವಾಗಿ ತೆರೆದು ಕಾರ್ಯನಿರ್ವಹಿಸ ಬೇಕಾಗಿದೆ ಎಂದು ರಿಕ್ಷಾ ಚಾಲಕರು ತಮ್ಮ ಬೇಡಿಕೆಯನ್ನು ಎತ್ತಿದ್ದಾರೆ. 

ಉಪ್ಪಳದಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ ಸಿಎನ್ ಜಿ ಕೇಂದ್ರದ ಕಾಮಗಾರಿ:

ಉಪ್ಪಳ ಭಾಗದಲ್ಲಿ ಈಗಾಗಲೇ ಸಿಎನ್ ಜಿ ಕೇಂದ್ರಕ್ಕೆ ಅನುಮತಿ ದೊರೆತಿದ್ದು ಆದರೆ ಅದರ ಕಾಮಗಾರಿ ಮಂದಗತಿಯಲ್ಲಿ  ಸಾಗುತ್ತಿದ್ದು ಇದರ ಕಾಮಗಾರಿ ಪೂರ್ಣಗೊಂಡರೆ ಸ್ವಲ್ಪ ಮಟ್ಟಿಗೆ ಉಸಿರಾಡಬಹುದು ಎನ್ನುತ್ತಾರೆ ರಿಕ್ಷಾ ಚಾಲಕರು.

ಅಭಿಮತ

ಮಂಜೇಶ್ವರ ಭಾಗದಲ್ಲಿ ಸಾವಿರಕ್ಕಿಂತಲೂ ಅಧಿಕ ಸಿಎನ್ ಜಿ ರಿಕ್ಷಾಗಳು ನಿಲ್ದಾಣಗಳಲ್ಲಿ ಬಾಡಿಗೆ ಮಾಡುತ್ತಿದ್ದು ಅದಕ್ಕೆ ಬೇಕಾದ ಸಿಎನ್ ಜಿ ಮಾತ್ರ ಈ ಭಾಗದಲ್ಲಿ ಇಲ್ಲ. ತಲಪಾಡಿ, ಕಾಸರಗೋಡು, ಬೋಳಿಯಾರ್ ಭಾಗಕ್ಕೆ ತೆರಳಬೇಕಾದ ಅನಿವಾರ್ಯ ನಮ್ಮದು. ಮಂಜೇಶ್ವರ ಭಾಗವಾದ ಹೊಸಂಗಡಿ, ಬಾಯಾರು, ಉಪ್ಪಳ, ಮೀಯಪದವು, ಮುರತ್ತಣೆಯಲ್ಲಿ ಒಂದು ಸುಸಜ್ಜಿತ ಸಿಎನ್ ಜಿ ಪಂಪುಗಳು ತೆರೆದರೆ ಅದೆಷ್ಟೋ ರಿಕ್ಷಾಚಾಲಕರಿಗೆ ಉಪಯೋಗವಾಗುತ್ತದೆ. ಆ ನಿಟ್ಟಿನಲ್ಲಿ ಸಂಬಂಧ ಪಟ್ಟವರು ಶ್ರಮವಹಿಸಬೇಕು ಎಂಬುದು ರಿಕ್ಷಾಚಾಲಕನಾಗಿ ನಮ್ಮೆಲ್ಲರ ಬೇಡಿಕೆಯಾಗಿದೆ.

-ಯೋಗಿಶ್ 

ಆಟೋಚಾಲಕ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries