ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಸಾಂತ್ವನಂ ಬಡ್ಸ್ ವಿಶೇಷ ಚೇತನರ ಶಾಲೆಯಲ್ಲಿ ನೂತನ ಶೈಕ್ಷಣಿಕ ವರ್ಷದ ಪ್ರವೇಶೋತ್ಸವ ಜರಗಿತು. ಜಿಲ್ಲಾ ಕುಟುಂಬಶ್ರೀ ಮಿಷನ್ ಸಹಕಾರದಲ್ಲಿ ನಡೆದ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು. ಪಂ.ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌದಭಿ ಹನೀಫ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಕುಟುಂಬಶ್ರೀ ಜಿಲ್ಲಾ ಮಿಷನ್ ಎಡಿಎಂಸಿ ಕಿಶೋರ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಪಂ.ಸದಸ್ಯ ಮಹೇಶ್ ಭಟ್, ಕೆಎ???ಬಿ ಇಂಜಿನಿಯರ್ ರಾಜಗೋಪಾಲ್, ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ, ಸ್ನೇಹ ಕೌನ್ಸಿಲರ್ ಶೋಭಾ, ಸಮುದಾಯಿಕ ಕೌನ್ಸಿಲರ್ ಪ್ರಸೀತಾ,ರಾಜರಾಮ ಪೆರ್ಲ, ಶ್ರೀಸತ್ಯಸಾಯಿ ಸೇವಾ ಸಮಿತಿಯ ಸತ್ಯನಾರಾಯಣ ಪೆರ್ಲ, ಕಿಶನ್ ಕುಮಾರ್ ಸಭೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲೆ ಮರಿಯಾಂಬಿ ಸ್ವಾಗತಿಸಿ, ಸ್ಪೇಶಲ್ ಎಜುಕೇಟರ್ ಚೈತ್ರ ವಂದಿಸಿದರು.



.jpg)
.jpg)

