ಮುಳ್ಳೇರಿಯ: ನೆಟ್ಟಣಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳ್ಳೂರು ಪಂಚಾಯಿತಿ ಮಟ್ಟದ ಪ್ರವೇಶೋತ್ಸವ ಸೋಮವಾರ ನಡೆಯಿತು. ಗ್ರಾಪಂ ಅಧ್ಯಕ್ಷ ಶ್ರೀಧರ ಎಂ.ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ, 2ನೇ ವಾರ್ಡು ಸದಸ್ಯ ಚಂದ್ರಹಾಸ ರೈ ಮಕ್ಕಳಿಗೆ ಸಿಹಿತಿಂಡಿ ವಿತರಿಸಿದರು. ಪಿಟಿಎ ಅಧ್ಯಕ್ಷ ದಾಮೋದರ ನಾಯ್ಕ್, ಎಂಪಿಟಿಎ ಅಧ್ಯಕ್ಷೆ ಪುಷ್ಪಲತಾ, ಸಿಆರ್ ಸಿ ಕೋರ್ಡಿನೇಟರ್ ಶೀನ, ಓಂ ಶಿವ ಕ್ಲಬ್ ಅಧ್ಯಕ್ಷ ಹರ್ಷಪ್ರಸಾದ್ ರೈ ಶುಭ ಹಾರೈಸಿದರು.
ಪಂಚಾಯಿತಿ ಅಧ್ಯಕ್ಷರ ವತಿಯಿಂದ 1ನೇ ತರಗತಿ ಮಕ್ಕಳಿಗೆ ಬ್ಯಾಗ್ ಹಾಗೂ ಓಂ ಶಿವ ಕ್ಲಬ್ ವತಿಯಿಂದ ಕಲಿಕೋಪಕರಣ ಕೊಡುಗೆಯಾಗಿ ನೀಡಲಾಯಿತು. ಶಾಲೆಯ ವತಿಯಿಂದ ಮಕ್ಕಳಿಗೆ ಕಲಿಕೋಪಕರಣ ನೀಡಲಾಯಿತು. ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಖಿಲೇಶ್ ನಗುಮುಗಂ ಮಕ್ಕಳಿಗೆ ಕಲಿಕೋಪಕರಣಗಳನ್ನು ನೀಡಿದರು. ಪಿಟಿಎ ಸದಸ್ಯರು, ಮಕ್ಕಳ ಪೋಷಕರು, ಆಶಾ ಕಾರ್ಯಕರ್ತರು, ಗಣ್ಯರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಜಯಲತಾ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಆಬಿದ ವಂದಿಸಿದರು. ಶಿಕ್ಷಕಿ ಜಯಂತಿ ಮತ್ತು ಅಂಕಿತ ನೇತೃತ್ವ ವಹಿಸಿದ್ದರು.




.jpg)

