ಮಂಜೇಶ್ವರ: ಜಿ.ಎಂ. ಎಲ್.ಪಿ ಶಾಲೆ ಉದ್ಯಾವರ ತೋಟ ಇಲ್ಲಿ ಶಾಲಾ ಪ್ರವೇಶೋತ್ಸವ ಸೋಮವಾರ ಸಂಭ್ರಮದಿಂದ ಜರಗಿತು. ಶಾಲಾ ಪಿ.ಟಿ.ಎ ಅಧ್ಯಕ್ಷರಾದ ಅಬ್ದುಲ್ ಮುಸ್ಲಿಯಾರ್‍ರವರ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಗ್ರಾಮ ಪಂಚಾಯತಿ ಸದಸ್ಯೆ ಕುಲ್ಸಮ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಉದ್ಯಾವರ ದುಬೈ ಸಮಿತಿಯ ಪದಾಧಿಕಾರಿಗಳಾದ ಅನ್ವರ್ ಇಸ್ಮಾಯಿಲ್ ಸಲೀಂ, ಮಸೀದಿಯ , ಖತೀಬರಾದ ಅಬ್ದುಲ್ ಸಖಾಫಿ ಮಾತನಾಡಿದರು. ಉದ್ಯಾವರ ತೋಟಾ ಶಾಲಾ ಅಭಿವೃದ್ದಿ ಸಮಿತಿಯ ಸದಸ್ಯರಾದ ಆಶಿಪ್ ಉದ್ಯಾವರ, ಉಮ್ಮರಾಲಿ, ಫಯಾಜ್, ಫಾರುಖ್ ಶುಭಾಶಂಸನೆಗೈದರು.
ಒಂದನೆ ತರಗತಿಯಿಂದ ನಾಲ್ಕನೆ ತರಗತಿವರೆಗಿನ ಶಾಲಾ ಮಕ್ಕಳಿಗೆ ಬ್ಯಾಗು ಪುಸ್ತಕ ಮತ್ತು ಪಠನೋಪಕರಣಗಳನ್ನು ಉದ್ಯಾವರ ದುಬೈ ಸಮಿತಿ ಹಾಗು ತೋಟ ಶಾಲಾ ಅಭಿವೃದ್ಧಿ ಸಮಿತಿ ವತಿಯಿಂದ ಕೊಡುಗೆಯಾಗಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕೊಡುಗೈ ದಾನಿಗಳನ್ನು ಶಾಲಾ ಮುಖ್ಯ ಶಿಕ್ಷಕರಾದ ಇಸ್ಮಾಯಿಲ್ ಮೀಯಪದವು ಸ್ವಾಗತಿಸಿ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ಅಧ್ಯಾಪಿಕೆ ಪ್ರಮೀಳ ಗಾಯತ್ರಿ ಅಭಿಲಾಷ್ ಸಮೀನ ಆಯಿಷ ಸಹಕರಿಸಿದರು. ಹಿರಿಯ ಅಧ್ಯಾಪಕ ರವಿಶಂಕರ ನೆಗಳಗುಳಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು. ನೆರೆದ ರಕ್ಷಕರು ಮಕ್ಕಳು ಗಣ್ಯರಿಗೆಲ್ಲರಿಗೂ ಪಾಯಸ ಮತ್ತು ಸಿಹಿತಿಂಡಿ ವಿತರಿಸಲಾಯಿತು. ಅನಂತರ ಮಕ್ಕಳ ವಿವಿಧ ಚಟುವಟಿಕೆಗಳು ನಡೆಯಿತು.




.jpg)

