ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಶೈಕ್ಷಣಿಕ ವರ್ಷವೂ ಶಾಲಾ ಪ್ರವೇಶೋತ್ಸವದೊಂದಿಗೆ ಸಂಭ್ರಮ ಸಡಗರದಿಂದ ಸೋಮವಾರ ಆಚರಿಸಲಾಯಿತು. ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಉದ್ಘಾಟಿಸಿದ ರಾಜ್ಯಮಟ್ಟದ ಶಾಲಾ ಪ್ರವೇಶೋತ್ಸವದ ಪ್ರಸಾರವನ್ನು ಮಾಡಲಾಯಿತು. ಬಳಿಕ ಶಾಲಾ ಮಟ್ಟದ ಪ್ರವೇಶೋತ್ಸವವನ್ನು ವಾರ್ಡ್ ಸದಸ್ಯ ಅಬ್ದುಲ್ ಶರೀಫ್ ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿ ಬಿ.ಆರ್.ಸಿಯ ಟ್ರೈನರ್ ಆದ ಸುಮಯ್ಯ ಟೀಚರ್ ಉಪಸ್ಥಿತರಿದ್ದರು.
ಪಿ ಟಿ.ಎ ಅಧ್ಯಕ್ಷ ಕೆ.ನ್ ಇಬ್ರಾಹಿಂ ಹನೀಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಶಿಕ್ಷಕ ರಿಯಾಸ್ ಪೆರಿಂಗಡಿ ಹಾಗೂ ಫಾತಿಮ ಪಸೀನಾ ಟೀಚರ್ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಶಾಲೆಯ ನವಾಗತ ಮಕ್ಕಳಿಗೆ ಬ್ಯಾಗು, ಪುಸ್ತಕ, ಕೊಡೆ ಮತ್ತು ಇನ್ನಿತರ ಕಲಿಕೋಪಕರಣಗಳನ್ನು ವಿತರಿಸಲಾಯಿತು. ಶಾಲೆಯಿಂದ ಜಿ.ಎಲ್.ಪಿ. ಎಸ್ ಮೂಸೋಡಿ ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕಿ ಫಾತಿಮಾ ಫಸೀನಾ ರವರಿಗೆ ಇದೇ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಚಿತ್ರಾವತಿ ಚಿಗುರುಪಾದೆ ಸ್ವಾಗತಿಸಿ, ಶಿಕ್ಷಕಿ ಐಶ್ವರ್ಯ ವಂದಿಸಿದರು. ಬಳಿಕ ಮಕ್ಕಳಿಗೆ ಸಿಹಿ ತಿಂಡಿಗಳನ್ನು ವಿತರಿಸಲಾಯಿತು.




.jpg)

