ಕುಂಬಳೆ: ಮೋಟಾರ್ ಮತ್ತು ಎಂಜಿನಿಯರಿಂಗ್ ಕಾರ್ಮಿಕರ ಒಕ್ಕೂಟ (ಎಸ್.ಟಿ.ಯು) ಜಿಲ್ಲಾ ಪ್ರತಿನಿಧಿ ಸಮ್ಮೇಳನವು ವಿವಿಧ ಅಧಿವೇಶನಗಳ ಮೂಲಕ ಕುಂಬಳೆಯಲ್ಲಿ ಇತ್ತೀಚೆಗೆ ನಡೆಯಿತು. ಮಂಜೇಶ್ವರ ಮಂಡಲ ಎಸ್‍ಟಿಯು ಅಧ್ಯಕ್ಷ ಉಮರ್ ಅಪೋಲೋ ಧ್ವಜಾರೋಹಣ ಮಾಡಿದರು, ಎಸ್.ಟಿ.ಯು ರಾಷ್ಟ್ರೀಯ ಉಪಾಧ್ಯಕ್ಷ ಎ ಅಬ್ದುಲ್ ರಹಮಾನ್ ಉದ್ಘಾಟಿಸಿದರು. ಫೆಡರೇಶನ್ ಜಿಲ್ಲಾಧ್ಯಕ್ಷ ಶರೀಫ್ ಕೊಡವಂಚಿ ಅಧ್ಯಕ್ಷತೆ ವಹಿಸಿದ್ದರು, ಎಸ್.ಟಿ.ಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಪಿ.ಮುಹಮ್ಮದ್ ಅಶ್ರಫ್, ಜಿಲ್ಲಾಧ್ಯಕ್ಷ ಎ.ಅಹ್ಮದ್ ಹಾಜಿ, ಪ್ರಧಾನ ಕಾರ್ಯದರ್ಶಿ ಮುತ್ತಲಿಬ್ ಪಾರೆಕಟ್ಟೆ, ಖಜಾಂಚಿ ಪಿಐಎ ಲತೀಫ್ ಮಾಸ್ತರ್, ಮಂಜೇಶ್ವರ ಮಂಡಲ ಮುಸ್ಲಿಂ ಲೀಗ್ ಅಧ್ಯಕ್ಷ ಅಜೀಜ್ ಮಾರಿಕೆ, ಪ್ರಧಾನ ಕಾರ್ಯದರ್ಶಿ ಎ.ಕೆ.ಆರಿಫ್, ಖಜಾಂಚಿ ಸೈಫುಲ್ಲಾ ತಂಙಳ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಅಶ್ರಫ್ ಕಾರ್ಲೆ, ಕುಂಬಳೆ ಗ್ರಾ. ಪಂ. ಮುಸ್ಲಿಂ ಲೀಗ್ ಅಧ್ಯಕ್ಷ ಮುಹಮ್ಮದ್ ಅಲಿ, ಸೈಯದ್ ಹಾದಿ ತಂಙಳ್, ಜೆಡ್.ಎ. ಮೊಗ್ರಾಲ್, ಹನೀಫ್,ಎಸ್.ಟಿ.ಯು. ಜಿಲ್ಲಾ ಕಾರ್ಯದರ್ಶಿಗಳು ಸುಬೈರ್ ಮಾರ, ಹ್ಯಾರಿಸ್ ಬೋವಿಕ್ಕಾನ, ಮುಹಮ್ಮದ್ ಕುಂಞÂ್ಞ ಕೊಯಿಪ್ಪಾಡಿ ಉಪಸ್ಥಿತರಿದ್ದರು. ಫೆಡರೇಶನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಸೀರ್ ಮಣಿಯನ್ ಸ್ವಾಗತಿಸಿ, ಅಶ್ರಫ್ ಮುದಲಪ್ಪಾರೆ ವಂದಿಸಿದರು.
ಆರ್‍ಟಿಒ ಅಧಿಕಾರಿ ನಿಜು ಕೆ.ವಿ, ಕುಂಬಳೆ ಎಎಸ್‍ಐ ಬಾಬು ಟಿ.ವಿ. ಮೋಟಾರ್ ಕಲ್ಯಾಣ ನಿಧಿ ಅಧಿಕಾರಿ ಪ್ರವೀಣ್ ಮುಖಾಮುಖಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಫ್ತಾಬ್ ತಂಙಳ್ ಬರೆದ ಮೋಟಾರ್ ಕಲ್ಯಾಣ ನಿಧಿ 'ಕೈಪಿಡಿ'ಯನ್ನು ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ತಾಹಿರಾ ಯೂಸುಫ್ ಬಿಡುಗಡೆಗೊಳಿಸಿದರು. ಸಮ್ಮೇಳನಕ್ಕಾಗಿ ನಡೆದ ನಿಧಿಸಂಗ್ರಹಣಾ ಕೂಪನ್‍ಗಳ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು, ಮತ್ತು ಅತ್ಯುತ್ತಮ ಘಟಕ ಬಹುಮಾನವನ್ನು ತ್ರಿಕರಿಪುರ ಘಟಕಕ್ಕೆ ಮತ್ತು ಅತ್ಯುತ್ತಮ ಕಾರ್ಯ ಬಹುಮಾನವನ್ನು ಕಾಸರಗೋಡು ಘಟಕ ಕಾರ್ಯದರ್ಶಿ ಪ್ರಸಾದ್ ಅವರಿಗೆ ನೀಡಲಾಯಿತು. ಕೌನ್ಸಿಲ್ ಸಭೆಯನ್ನು ಫೆಡರೇಶನ್ ರಾಜ್ಯ ಅಧ್ಯಕ್ಷ ವಿ.ಎ.ಕೆ. ತಂಙಳ್ ಉದ್ಘಾಟಿಸಿದರು
ಎಸ್‍ಟಿಯು ರಾಜ್ಯ ಉಪಾಧ್ಯಕ್ಷ ಅಶ್ರಫ್ ಇದಾನೀರ್ ಚುನಾವಣೆಯನ್ನು ನಡೆಸಿಕೊಟ್ಟರು, ಮತ್ತು ಕುಟುಂಬಶ್ರೀ ಉದ್ಯೋಗ ಖಾತರಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮನ್ಸೂರ್ ಕುಂಜಿಪ್ಪು ಮಾತನಾಡಿದರು.
ನೂತನ ಪದಾಧಿಕಾರಿಗಳು: ಅಧ್ಯಕ್ಷರು: ಶರೀಫ್ ಕೊಡವಂಚಿ, ಉಪಾಧ್ಯಕ್ಷರು ಮೊಯಿನುದ್ದೀನ್ ಚೆಮ್ಮನಾಡ್, ಅಫ್ತಾಬ್ ತಂಙಳ್, ಸಿ.ಎಚ್.ಖಾಲಿದ್ ಪಡನ್ನಕ್ಕಾಡ್, ಹುಸೈನಾರ್ ತೆಕ್ಕಿಲ್, ಪಿ ಅಬ್ದುಲ್ ಖಾದರ್ ತೆಕ್ಕೆಕ್ಕಾಡ್, ಕುನ್ನಿಲ್ ಅಬ್ದುಲ್ಲಾ, ಪ್ರಧಾನ ಕಾರ್ಯದರ್ಶಿ: ಶಂಸೀರ್ ಮಣಿಯನೋಡಿ, ಕಾರ್ಯದರ್ಶಿ: ರಶೀದ್ ಮುರಿಯನವಿ, ಅಶ್ರಫ್ ತಿಕ್ಕರಿಪುರ, ಮಜೀದ್ ಕೊಂಪನಡ್ಕ, ಮೊಯ್ದೀನ್ ಮೂಎಂಬೈಲು, ಹ್ಯಾರಿಸ್ ಬಂದ್ಯೋಡು, ನಿಸಾರ್ ಚೋನಂಬಾಡಿ, ಕೋಶಾಧಿಕಾರಿ: ಅಶ್ರಫ್ ಮುದಲಪ್ಪಾರ, ಇಬ್ರಾಹಿಂ ಚೆಂಗಳ ಇಸ್ಮಾಯಿಲ್ ಇಶ್ ಹಕ್ ಅವರನ್ನು ನೇಮಿಸಲಾಯಿತು.


