ಬದಿಯಡ್ಕ: ಕುಂಬಳೆ ಸೀಮೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ. ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಸಭೆ ಭಾನುವಾರ ಶ್ರೀಕ್ಷೇತ್ರದಲ್ಲಿ ಜೀರ್ಣೋದ್ಧಾರ ಸಮಿತಿಯ ರಕ್ಷಾಧಿಕಾರಿಗಳಾದ ಬ್ರಹ್ಮ ಶ್ರೀ ಉಳಿಯತ್ತಾಯ ವಿಷ್ಣು ಆಸ್ರರ ಮಾರ್ಗದರ್ಶನದಲ್ಲಿ ಜರಗಿತು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಯಂ.ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರಾದ ಶ್ರೀಧರ ಪ್ರಸಾದ ಬೇಳ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿಯವರಾದ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ವಂದಿಸಿದರು.
ಕ್ಷೇತ್ರದ ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ಅಡಿಗ ಬೇಳ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರುಗಳಾದ ಸೂರ್ಯ ಶೆಟ್ಟಿ ಚೌಕಾರು ,ವಸಂತ ಬಂಡ್ರಡ್ಕ ,ಬಾಲಸುಬ್ರಹ್ಮಣ್ಯ ಭಟ್ ಚಕ್ಕಣಿಗೆ,ನಾರಾಯಣ ಶೆಟ್ಟಿ ವಿ ಎಂ ನಗರ , ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಹೆಬ್ಬಾರ್ ಚೌಕಾರು, ಇಂಜಿನಿಯರ್ ರಾಮಚಂದ್ರ ಶಾಸ್ತ್ರಿ, ಜೊತೆ ಕಾರ್ಯದರ್ಶಿಗಳಾದ ಗಣಾದಿರಾಜ ನಿಡುಗಳ, ಚಂದ್ರಶೇಖರ ಬಂಡ್ರಡ್ಕ, ಉದಯ ವಿ.ಎಂ. ನಗರ, ಕ್ಷೇತ್ರದ ವ್ಯವಸ್ಥಾಪಕ ಹರಿಕೃಷ್ಣ ಮಯ್ಯ, ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಕೇಶವ ಪ್ರಸಾದ ಕೊಡ್ವಕೆರೆ, ರಾಮಪ್ಪ ಮಂಜೇಶ್ವರ, ಉದಯ ಬಂಡ್ರಡ್ಕ, ಗಣೇಶ್ ಕುಮಾರಮಂಗಲ, ಉದಯ ಬೇಳ, ಕೃಷ್ಣ, ಉದನೇಶ್ವರ, ಪ್ರಕಾಶ್ ಕುಲಾಲ್, ಶಂಕರನಾರಾಯಣ ಭಟ್ ಅರ್ಜುನಗುಳಿ, ಬಿ.ಕೃಷ್ಣ ಟೈಲರ್, ಕೇಶವ ಕುಮಾರಮಂಗಲ, ಪ್ರಕಾಶ ಕುಮಾರಮಂಗಲ, ಗೋಪಾಲಕೃಷ್ಣ ಮಲ್ಲಡ್ಕ, ಮಹೇಶ್ ವಳಕುಂಜ, ವಿಜಯ ವಿ.ಯಂ.ನಗರ, ಮೋಹನ ಕೃಷ್ಣ, ಸುಧೀಶ್, ಅಜಿತ್ ಮೊದಲಾದವರು ಉಪಸ್ಥಿತರಿದ್ದು ಚರ್ಚೆಯಲ್ಲಿ ಭಾಗವಹಿಸಿದರು.

.jpg)
