ಕಾಸರಗೋಡು: ಜಿಲ್ಲೆಯ ಎಲ್ಲಾ ಶಾಲಾ ಕಟ್ಟಡಗಳಿಗೆ ಫಿಟ್‍ನೆಸ್ ಪ್ರಮಾಣ ಪತ್ರಗಳನ್ನು ಪಡೆದುಕೊಂಡಿರುವುದು ಕಡ್ಡಾಯವಾಗಿರುವುದಾಗಿ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ತಿಳಿಸಿದ್ದಾರೆ. ಫಿಟ್‍ನೆಸ್ ಸರ್ಟಿಫಿಕೇಟ್ ಹೊಂದಿರದ ಶಾಲೆಗಳನ್ನು ತೆರೆದು ಕಾರ್ಯಾಚರಿಸದಿರುವಂತೆ ಸೂಚಿಸಲಾಗಿದ್ದು, ಅಲ್ಲಿನ ವಿದ್ಯಾರ್ಥಿಗಳಿಗೆ ಸನಿಹದ ಶಾಲೆಗಳಲ್ಲಿ ಅಧ್ಯಯನಕ್ಕೆ ಅವಕಾಶ ಮಾಡಿಕೊಡುವಂತೆಯೂ ಜಿಲ್ಲಾ ಶಿಕ್ಷಣ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ವಿದ್ಯಾರ್ಥಿಗಳ ಸುರಕ್ಷತೆ ಜತೆಗೆ ಕಟ್ಟಡಗಳ ಸುರಕ್ಷತೆ ಕಾಯ್ದುಕೊಳ್ಳುವ ಬಗ್ಗೆ ರಕ್ಷಕ-ಶಿಕ್ಷಕ ಸಮಿತಿ ವಿಶೇಷ ಗಮನ ಹರಿಸಬೇಕು. ಶಾಲೆಗಳ ಸುತ್ತು ಅವರಣಗೋಡೆ ಹಾಗೂ ಗೇಟ್‍ಗಳು ಸುರಕ್ಷಿತವಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದರ ಜತೆಗೆ ಶಾಲಾ ವಠಾರದ ಅಪಾಯಕಾರಿ ಮರಗಳನ್ನು ಹಾಗೂ ರೆಂಬೆಗಳನ್ನು ಕತ್ತರಿಸಿ ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಚಿತ್ರ 1): ಶಾಲೆ ಪುನರರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಸರಗೋಡು ಆಸುಪಾಸಿನ ಶಾಲೆಗಳಲ್ಲಿ ತರಗತಿ ಶುಚೀಕರಣಕಾರ್ಯ ಶಾಲ ರಕ್ಷಕ ಶಿಕ್ಷಕ ಸಮಿತಿ ವತಿಯಿಂದ ನಡೆಸಲಾಯಿತು. 2) ಕಾಸರಗೋಡು ನಗರಸಭಾ ಹಿರಿಯಪ್ರಾಥಮಿಕ ಶಾಲಾ ವಠಾರದ ಅಪಯಕಾರಿ ಮರಗಳ ರೆಂಬೆಯನ್ನು ಕತ್ತರಿಸಿ ತೆಗೆಯಲಾಯಿತು.






