ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆಗೆ ಅಕ್ಪ ವಿರಾಮ ದೊರೆತಿದ್ದು, ಮುಂದಿನ ತಾಸುಗಳಲ್ಲಿ ಜಿಲ್ಲೆಯ ವಿವಿಧೆಡೆ ಮತ್ತೆ ಮಳೆ ಬಿರುಸುಗೊಳ್ಳುವ ಸಾಧ್ಯತೆ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾನುವಾರ ಜಿಲ್ಲಾದ್ಯಂತ ಬಿಸಿಲಿನ ವಾತಾವರಣವಿತ್ತು. ಮುಂದಿನ 24ತಾಸುಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 65.5ರಿಂದ 115.5ಮಿ.ಮೀ ಮಳೆಯಾಗುವ ಸಾಧ್ಯತೆಯಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.
ಸಮುದ್ರದಲ್ಲಿ ಬೃಹತ್ ಅಲೆಗಳೆದ್ದೇಳುವ ಸಾಧ್ಯತೆ ಹಿನ್ನೆಲೆಯಲ್ಲಿ ಮೀನುಗಾರರಿಗೆ ಪ್ರತ್ಯೇಕ ಜಾಗ್ರತಾ ನಿರ್ದೇಶ ನೀಡಲಾಗಿದೆ. ಕಾಸರಗೋಡು ಸೇರಿದಂತೆ ಕೆಲವೊಂದು ಜಿಲ್ಲೆಗಳಲ್ಲಿ ಭಾನುವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಇದು ಜೂ. 4ರ ವರೆಗೂ ಮುಂದುವರಿಯಲಿರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಿರುಸಿನ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಪಡಿತರ ಸಾಮಗ್ರಿ ಖರೀದಿಸಲಾಗದ ಗ್ರಾಹಕರಿಗೆ ಜೂ. 4ರ ವರೆಮೀ ಕಾಲಾವಧಿಯ ಪಡಿತರ ವಿತರಿಸುವಂತೆ ನಾಗರಿಕಪೂರೈಕೆ ಇಲಾಖೆ ಮಾಹಿತಿ ನೀಡಿದೆ.






