ಕಾಸರಗೋಡು: ಅಡ್ಕತ್ತಬೈಲ್ ಗುಡ್ಡೆ ದೇವಸ್ಥಾನದ ಬಳಿಯ ಯುಗಪುರುಷ ನರೇಂದ್ರಮೋದಿ ವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಯೋಗ ಹಾಗೂ ಸಂಗೀತ ದಿನವನ್ನು ಆಚರಿಸಲಾಯಿತು. ರುಡ್ ಸೆಟ್ ಸಂಸ್ಥೆಯ ಹಿರಿಯ ತರಬೇತುದಾರ ನಾಗೇಶ್ ಮಲ್ಯ ಸಮಾರಂಭ ಉದ್ಘಾಟಿಸಿದರು. ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸತೀಶ್ ಕಾಮತ್, ದೇವಿಕಾ ಶೆಣೈ ಹಾಗೂ ಶಾಲಾ ಸಹ ಪಟ್ಯೇತರ ಚಟುವಟಕೆಗಳ ಉಸ್ತುವಾರಿಯಾಗಿರುವ ಶಾಹಿರತ್ನ ಮತ್ತು ಶಾಲಾ ಮುಖ್ಯ ಶಿಕ್ಷಕಿ ಶ್ರೀವಳ್ಳಿ ಉಪಸ್ಥಿತರಿದ್ದರು. ನಾಗೇಶ್ ಮಲ್ಯ ಇವರು ಯೋಗದ ಕುರಿತು ವಿವರಣೆಯನ್ನು ನೀಡಿ ಯೋಗದ ಕೆಲವು ಆಸನಗಳನ್ನು ಪ್ರದರ್ಶಿಸಿದರು. ವಿದ್ವಾನ್ ಸದಾಶಿವ ಆಚಾರ್ಯ ಸಂಗೀತದ ವಿವರಣೆಯನ್ನು ತಿಳಿಸಿ ಹಾಡುಗಳನ್ನು ಹಾಡಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದರು. ಶಾಲಾ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ಹಾಗೂ ಸಂಗೀತ ಕಾರ್ಯಕ್ರಮ ನಡೆಯಿತು. ಶಾಲಾ ಶಿಕ್ಷಕಿಯರಾದ ಸವಿತಾ ಸ್ವಾಗತಿಸಿದರು. ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು. ಮಾಲಾಶ್ರೀ ವಂದಿಸಿದರು.





