ಕಾಸರಗೋಡು: ಆಲ್ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಷನ್(ಎಕೆಪಿಎ)ಕಾಸರಗೋಡು ವೆಸ್ಟ್ ಯೂನಿಟ್ ವತಿಯಿಂದ "ವಿಶ್ವ ಪರಿಸರ ದಿನ" ವನ್ನು ಆಚರಿಸಲಾಯಿತು. ಕಾರ್ಯಖ್ರಮದ ಅಂಗವಾಗಿ ಕಾಸರಗೋಡು ಜನರಲ್ ಆಸ್ಪತ್ರೆ ವಠಾರದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಆಸ್ಪತ್ರೆಯ ಸುಪರಿಂಟೆಂಡ್ ಡಾ. ಶ್ರೀಕುಮಾರ್ ಮುಕುಂದನ್ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯೂನಿಟ್ ಅಧ್ಯಕ್ಷ ವಸಂತ್ ಕೆರೆಮನೆ, ಎಕೆಪಿಎ ವಲಯ ಕೋಶಾಧಿಕಾರಿ ಮನು ಎಲ್ಲೋರ, ಯೂನಿಟ್ ನೀರೀಕ್ಷಕ ಶ್ರೀಜಿತ್, ಎಕೆಪಿಎ ಜಿಲ್ಲಾ ಸ್ಪೊಟ್ಸ್ ಕೋರ್ಡಿನೇಟರ್ ರತೀಶ್ ರಾಮು, ವಲಯ ಸಮಿತಿ ಸದಸ್ಯ ಸುಬ್ರಹ್ಮಣ್ಯ ಎಂ.ಎಸ್, ಮೈಂದಪ್ಪ, ಸಾಂತ್ವನ ಕೋರ್ಡಿನೇಟರ್ ಶಾಲಿನಿ ರಾಜೇಂದ್ರನ್, ಪಿಆರ್‍ಒ ವಾಸು.ಎ, ಸಮಿತಿ ಸದಸ್ಯ ಚಂದ್ರಶೇಖರ ಎಂ, ಆಸ್ಪತ್ರೆ ನಸಿರ್ಂಗ್ ಸುಪರಿಂಟೆಂಡ್ ಶ್ರೀಮತಿ ಲತಾ ಎಂ, ಎಚ್‍ಐಸಿ ಇನ್ ಚಾರ್ಜ್ ಶೆಲ್ಜಿ ಮೋಳ್, ಜೆಎಚ್‍ಎ ರಾಧಾಕೃಷ್ಣನ್, ಪಿಆರ್‍ಒ ಸೆಲ್ಮಾ, ಆಸ್ಪತ್ರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಯುನಿಟ್ ಕಾರ್ಯದರ್ಶಿ ವಿಶಾಖ್ ಸ್ವಾಗತಿಸಿದರು. ಯೂನಿಟ್ ಕೋಶಾಧಿಕಾರಿ ಗಣೇಶ್ ರೈ ವಂದಿಸಿದರು.







