ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಟಾನ, ಕಾಸರಗೋಡು ವತಿಯಿಂದ ವಿಶೇಷವಾದ ಯಕ್ಷಗಾನ ಪ್ರಸಂಗ ರಚನಾ ಶಿಬಿರ ಹಮ್ಮಿಕೊಳ್ಳಲಗಿದೆ. ಯುವ ಪ್ರಸಂಗ ಕವಿಗಳು ಛಂದೋಬದ್ಧವಾಗಿ ಯಕ್ಷಗಾನ ಪದಗಳ ರಚನೆ, ಕಾಲಗಳ ಗಣತಿಗೆ ಅನುಗುಣವಾಗಿ ಯಾವ ಪದಗಳನ್ನು ರಚಿಸಬೇಕು, ಯಾವ ಪಾತ್ರಗಳಿಗೆ ಯಾವ ರಚನೆಗಳು ಸರಿಹೊಂದುತ್ತವೆ, ನವ ರಸಗಳಲ್ಲಿ ಯಾವ್ಯಾವ ರಸಗಳಿಗೆ ಯಾವ್ಯಾವ ರಾಗ, ತಾಳಗಳ ಬಳಕೆ ಮಾಡಬೇಕು, ಕಥಾ ಸನ್ನಿವೇಶಗಳನ್ನು ಹೇಗೆ ಹೆಣೆಯಬೇಕು. ಮುಂತಾದ ವಿಷಯಗಳ ಕುರಿತು ಮಾರ್ಗದರ್ಶನ ಪಡೆಯಬಹುದಾಗಿದೆ.
ಪಾರ್ತಿಸುಬ್ಬ ಯಕ್ಷಗಾನ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷ ಕವಿ ಶ್ರೀಧರ ಡಿ. ಎಸ್. ಕಿನ್ನಿಗೋಳಿ ಹಾಗೂ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಮೈಸೂರು ಇವರ ಮಾರ್ಗದರ್ಶನದಲ್ಲಿ ಜುಲೈ 7ರಿಂದ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಉಚಿತವಾಗಿ ಕಮ್ಮಟ ನಡೆಯಲಿದೆ. ಯಕ್ಷಗಾನ ಕ್ಷೇತ್ರದಲ್ಲಿ ಅಪರೂಪವಾದ ಈ ಶಿಬಿರದ ಪ್ರಯೋಜನವನ್ನು ಆಸಕ್ತರು ಪಡೆದುಕೊಳ್ಳಬಹುದಗಿದೆ. ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಲು ಹಾಗೂ ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ(9448344380)ಸಂಪರ್ಕಿಸುವಂತೆ ಪ್ರತಿಷ್ಟಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




