ಮಂಜೇಶ್ವರ: ಮಂಜೇಶ್ವರದ ಎಲ್ಲೆಡೆ ಶನಿವಾರ ಮುಂಜಾನೆಯಿಂದಲೇ ಅತ್ಯಂತ ಸಡಗರ, ಸಂಭ್ರಮದಿಂದ ಶನಿವಾರ ಈದುಲ್ ಅಝ್ಹಾ(ಬಕ್ರೀದ್) ಅನ್ನು ಆಚರಿಸಲಾಯಿತು.
ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಮುಸ್ಲಿಮರು ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ನಮಾಝ್ ನಿರ್ವಹಿಸಿ, ಈದ್ ಖುತ್ಸಾ ಮತ್ತು ಪ್ರವಚನ ಆಲಿಸಿ, ಈದ್ ಸಂದೇಶ ಸ್ವೀಕರಿಸುವುದು ಹಾಗೂ ನೆರೆಮನೆ, ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡಿರುವುದು ಕಂಡುಬಂತು. ತೂಮಿನಾಡು ಅಲ್ ಫತಾಃ ಜುಮಾ ಮಸೀದಿ, ಕುಂಜತ್ತೂರು ಮಸ್ಜಿದ್ ನೂರ್, ದಾರುಸ್ಸಲಾಂ ಸಲಫಿ ಮಸೀದಿ, ಕುಂಜತ್ತೂರು ಜುಮಾ ಮಸೀದಿ, ಉದ್ಯಾವರ ಜುಮಾ ಮಸೀದಿ, ಪೊಸೋಟು ಜುಮಾ ಮಸೀದಿ, ಪಾಂಡ್ಯಾಲ್ ಜುಮಾ ಮಸೀದಿ ಸಹಿತ ಮಂಜೇಶ್ವರದ ವಿವಿಧ ಜುಮಾ ಮಸ್ಜಿದ್ ಹಾಗೂ ಈದ್ಗಾ ನಮಾಝ್, ಖುತ್ಬಾ ನೆರವೇರಿಸಲಾಯಿತು.
ಹಿರಿಯ ಮಕ್ಕಳಿಂದ ಹಿಡಿದು ಹಿರಿಯರ ಸಹಿತ ಹೊಸ ಬಟ್ಟೆಬರೆ ಧರಿಸಿ, ಸುಗಂಧ ದ್ರವ್ಯ ಹಚ್ಚಿ ವಿವಿಧ ಬಗೆಯ ತಿಂಡಿ-ತಿನಿಸು ತಿಂದು ಹಬ್ಬವನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸಿದರು. ಈದ್ ನಮಾಝ್-ಖುತ್ಬಾದ ಬಳಿಕ ಕುಟುಂಬಸ್ಥರು, ಸ್ನೇಹಿತರು ಸಮೀಪದ ನಿವಾಸಿಗಳ ಮನೆಗೆ ತೆರಳಿ ಈದ್ ಶುಭಾಷಯ ತಿಳಿಸಿದರು.
ಕುಂಜತ್ತೂರು ಮಸ್ಜಿದುನ್ನೂರ್ ಜುಮಾ ಮಸೀದಿಯಲ್ಲಿ ಹಿರಿಯ ವಿದ್ವಾಂಸ ಖತೀಬ್ ನೌಫಲ್ ಒಟ್ಟುಮಾಲ್ ಅವರ ನೇತೃತ್ವದಲ್ಲಿ ಈದ್ ನಮಾಝ್ ಹಾಗೂ ಖುತ್ಬಾ ಪಾರಾಯಣ ನಡೆಯಿತು.




.jpg)

