ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಎಯುಪಿ ಶಾಲೆಯಲ್ಲಿ ವಿಶ್ವ ಪರಿಸರ ದಿನದ ಕಾರ್ಯಕ್ರಮ ಶಾಲಾ ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಜರಗಿತು. ಪರಿಸರ ದಿನದ ಮಹತ್ವವನ್ನು ಶಾಲಾ ಅಧ್ಯಾಪಕಿ ರಾಧಾಮಣಿ ಟೀಚರ್ ಇವರು ವಿದ್ಯಾರ್ಥಿಗಳಿಗೆ ತಿಳಿಸಿದರು.ಶಾಲಾ ವಿದ್ಯಾರ್ಥಿಗಳಾದ ಲಿಖಿತ ಟಿ ಹಾಗೂ ಮೊಹಮ್ಮದ್ ಶಿಹಾನ್ ಇವರಿಗೆ ಗಿಡವನ್ನು ನೀಡುವುದರ ಮೂಲಕ ಶಾಲಾ ಮುಖ್ಯ ಶಿಕ್ಷರಾದ ಅರವಿಂದಾಕ್ಷ ಭಂಡಾರಿ ಇವರು ಕಾರ್ಯಕ್ರಮಕ್ಕೆ ಔಪಚಾರಿಕವಾಗಿ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಾವು ರಚಿಸಿದ ವಿಶ್ವ ಪರಿಸರ ದಿನದ ಪೋಸ್ಟರ್ ಗಳನ್ನು ಪ್ರದರ್ಶಿಸಿದರು.
ಬಳಿಕ ಪರಿಸರಕ್ಕೆ ಸಂಬಂಧಿಸಿದ ಹಾಡನ್ನು ಶಾಲಾ ವಿದ್ಯಾರ್ಥಿಗಳಾದ ಸಾನಿಧ್ಯ ಭಟ್, ಹರಿಸ್ಮಿತಾ ಹಾಗೂ ವೀಕ್ಷಾ ಹಾಡಿದರು. ಅಧ್ಯಾಪಕ ವಿನಯ ಕೃಷ್ಣ ಅವರು ವೈಯಕ್ತಿಕ ನೈರ್ಮಲ್ಯ, ಪರಿಸರ ನೈರ್ಮಲ್ಯ, ಹಸಿರು ಕ್ಯಾಂಪಸ್ ಹಾಗೂ ಶಾಲಾ ಸೌಂದರ್ಯವರ್ಧನೆಯ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು. ನಂತರ 7ನೇ ತರಗತಿ ವಿದ್ಯಾರ್ಥಿನಿ ಲಿಖಿತ ತಂದ ಗಿಡವನ್ನು ಶಾಲಾ ಪರಿಸರದಲ್ಲಿ ನೆಡಲಾಯಿತು.




.jpg)

