HEALTH TIPS

ಬಿಜೆಪಿ ಅಧ್ಯಕ್ಷರ ಆಯ್ಕೆಗೂ ಮುನ್ನ ಆರ್‌ಎಸ್‌ಎಸ್ 'ಪ್ರಾಂತ ಪ್ರಚಾರಕ್' ವಾರ್ಷಿಕ ಸಭೆ ದಿನಾಂಕ ಘೋಷಣೆ

ನವದೆಹಲಿ: ಬಿಜೆಪಿ ತನ್ನ ಹೊಸ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಸಜ್ಜಾಗುತ್ತಿರುವಂತೆಯೇ, ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ಈ ವರ್ಷ ಜುಲೈ 4 ರಿಂದ 6 ರವರೆಗೆ ದೆಹಲಿಯಲ್ಲಿ ತನ್ನ ವಾರ್ಷಿಕ ರಾಷ್ಟ್ರ ಮಟ್ಟದ ಪ್ರಾಂತ ಪ್ರಚಾರಕ್(ಪ್ರಾಂತೀಯ ಉಸ್ತುವಾರಿ ಪ್ರಚಾರಕ್) ಸಭೆ ನಡೆಸಲು ನಿರ್ಧರಿಸಿದೆ.

ದೆಹಲಿಯಲ್ಲಿರುವ ಆರ್‌ಎಸ್‌ಎಸ್ ಪ್ರಧಾನ ಕಚೇರಿ 'ಕೇಶವ್ ಕುಂಜ್'ದಲ್ಲಿ ವಾರ್ಷಿಕ ಸಭೆ ನಡೆಯಲಿದೆ.

ಇದನ್ನು ಅಧಿಕೃತವಾಗಿ ದೃಢಪಡಿಸಿದ ಆರ್‌ಎಸ್‌ಎಸ್‌ ಅಖಿಲ ಭಾರತೀಯ ಪ್ರಚಾರ ಪ್ರಮುಖ್(ಅಖಿಲ ಭಾರತ ಪ್ರಚಾರ ಮುಖ್ಯಸ್ಥ) ಸುನಿಲ್ ಅಂಬೇಕರ್ ಅವರು, "ಎಲ್ಲಾ ಪ್ರಾಂತ-ಪ್ರಚಾರಕರು, ಸಹ-ಪ್ರಾಂತ ಪ್ರಚಾರಕರು ಮತ್ತು ಕ್ಷೇತ್ರ (3-4 ಪ್ರಾಂತ್ಯಗಳ ಪ್ರಾದೇಶಿಕ ಘಟಕ) ಪ್ರಚಾರಕರು ಮತ್ತು ಸಹ-ಕ್ಷೇತ್ರ ಪ್ರಚಾರಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ" ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್‌ನ ಸಾಂಸ್ಥಿಕ ರಚನೆಯು 11 ಪ್ರದೇಶಗಳು ಮತ್ತು 46 ಪ್ರಾಂತಗಳನ್ನು ಒಳಗೊಂಡಿದೆ.

"ಮುಂಬರುವ ವರ್ಷದ ಅನುಷ್ಠಾನ ಯೋಜನೆಯ ಕುರಿತು ಚರ್ಚಿಸಲು ಇದು ಒಂದು ಪ್ರಮುಖ ಸಭೆ ಎಂದು ಪರಿಗಣಿಸಲಾಗಿದೆ" ಎಂದು ಅಂಬೇಕರ್ ಅವರು ತಿಳಿಸಿದ್ದಾರೆ.

ಆರ್‌ಎಸ್‌ಎಸ್ ಶತಮಾನೋತ್ಸವ ವರ್ಷದ(2025-26) ಕಾರ್ಯಕ್ರಮಗಳು ಈ ವರ್ಷದ ಅಕ್ಟೋಬರ್ 2 ರಂದು ಬರುವ ವಿಜಯದಶಮಿಯಿಂದ ಪ್ರಾರಂಭವಾಗುತ್ತವೆ ಮತ್ತು ಮುಂದಿನ ವರ್ಷದ 2026ರ ವಿಜಯದಶಮಿಯವರೆಗೆ ಮುಂದುವರಿಯುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೆಹಲಿಯಲ್ಲಿ ನಡೆಯುವ ಆರ್‌ಎಸ್‌ಎಸ್ ಸಭೆಯಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್, ಸರ್ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮತ್ತು ಡಾ. ಕೃಷ್ಣ ಗೋಪಾಲ್, ಸಿಆರ್ ಮುಕುಂದ್, ಅರುಣ್ ಕುಮಾರ್, ರಾಮದತ್, ಅತುಲ್ ಲಿಮಾಯೆ ಮತ್ತು ಅಲೋಕ್ ಕುಮಾರ್ ಸೇರಿದಂತೆ ಎಲ್ಲಾ ಸಹ-ಸರ್ಕಾರ್ಯವಾಹರು, ಎಲ್ಲಾ ರಾಷ್ಟ್ರೀಯ ಮಟ್ಟದ ಕಾರ್ಯ ವಿಭಾಗ ಪ್ರಮುಖ್‌ಗಳು (ವರ್ಟಿಕಲ್ ಇನ್-ಚಾರ್ಜ್‌ಗಳು) ಮತ್ತು ಇತರ ಕಾರ್ಯಕಾರಿ ಮಂಡಳಿ ಸದಸ್ಯರು ಭಾಗವಹಿಸಲಿದ್ದಾರೆ.

ಏತನ್ಮಧ್ಯೆ, ಬಿಜೆಪಿ, ಮೂಲಗಳು ಹೇಳುವಂತೆ ಪಕ್ಷದ ಹೊಸ ರಾಷ್ಟ್ರೀಯ ಅಧ್ಯಕ್ಷರಾಗಿ ಒಮ್ಮತದ ಅಭ್ಯರ್ಥಿಯ ಹೆಸರನ್ನು ಸಹ ಈ ವೇಳೆ ಘೋಷಿಸುವ ಸಾಧ್ಯತೆಯಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries