ಡಾಮಾಸ್ಕಸ್ : ಇರಾನ್ ಪರಮಾಣು ನೆಲೆಗಳ ಮೇಲೆ ಅಮೆರಿಕ ದಾಳಿ ಮಾಡಿದ ನಂತರ ಖಮೇನಿ ಕೆರಳಿದ್ದಾರೆ. ಅಮೆರಿಕದ ಮೇಲೆ ದಾಳಿಗೆ ಪ್ಲಾನ್ ಮಾಡಿದ್ದಾರೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ಸಿರಿಯಾದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಯ ಮೇಲೆ ಇರಾನ್ ದಾಳಿ ಮಾಡಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ಮಾಡಿವೆ.
ಇರಾನ್ ದಾಳಿಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಇದುವರೆಗೆ ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ.
ಅಮೆರಿಕ ವಿರುದ್ಧ ಪ್ರತಿ ದಾಳಿಗೆ ಇರಾನ್ ಮತ್ತೆ ಸಿದ್ಧತೆ
ಆಪರೇಷನ್ ಮಿಡ್‍ನೈಟ್ ಹ್ಯಾಮರ್ ಹೆಸರಲ್ಲಿ ಇರಾನ್‍ನ ಮೂರು ಪ್ರಮುಖ ಪರಮಾಣು ಕೇಂದ್ರಗಳಾದ ಫೋರ್ಡೊ, ನಟಾಂಜ್ ಮತ್ತು ಇಸ್ಫಹಾನ್ ಮೇಲೆ ಅಮೆರಿಕಾ ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ಕೆರಳಿ ಕೆಂಡವಾಗಿದ್ದು ಪ್ರತಿದಾಳಿ ನಡೆಸಲು ಪ್ರತಿಜ್ಞೆ ಮಾಡಿದೆ. ಇದರ ಬೆನ್ನಲ್ಲೇ ಇರಾನ್ ದಾಳಿಯ ತಂತ್ರ ರೂಪಿಸಲು ಮುಂದಾಗಿದೆ.
ವಿಶ್ವಸಂಸ್ಥೆಯ ಇರಾನ್ ರಾಯಭಾರಿ ಅಮೀರ್ ಸಯೀದ್ ಇರಾಮಿನಿ , ಅಮೆರಿಕಾದ ಮೇಲೆ ದಾಳಿ ಮಾಡುವ ಮೂಲಕ ಇರಾನ್ ರಕ್ಷಣೆ ಮಾಡಿಕೊಳ್ಳುವ ಉದ್ದೇಶ ನಮ್ಮದು, ಅಮೆರಿಕಾದ ಮೇಲೆ ನಡೆಯುವ ದಾಳಿ ಮತ್ತು ಸಮಯವನ್ನು ನಾವು ನಿರ್ಧರಿಸುತ್ತೇವೆ ಎಂದು ಶಪಥ ಮಾಡಿದ್ದರು. ಆ ಮಾತಿನಂತೆ ಇದೀಗ ಅಮೆರಿಕ ವಾಯುನೆಲೆ ಮೇಲೆ ಇರಾನ್ ದಾಳಿ ಮಾಡಿದೆ.




