ಜೆರುಸಲೇಂ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸರಕಾರದ ವಿರುದ್ಧ ಗುರುವಾರ ಮಂಡನೆಯಾದ ಅವಿಶ್ವಾಸ ಗೊತ್ತುವಳಿ ವಿಫಲವಾಗಿದೆ. ಆದಾಗ್ಯೂ ಸರಕಾರದ ಮೈತ್ರಿಯ ಭಾಗವಾಗಿದ್ದ ಯಹೂದಿ ಧಾರ್ಮಿಕ ವಾದಿ (ಅಲ್ಟ್ರಾ-ಆರ್ಥ ಡಕ್ಸ್)ಗಳ ಪ್ರತಿನಿಧಿಸುವ ಪಕ್ಷಗಳ ಹಲವು ಸದಸ್ಯರು ನೆತನ್ಯಾಹು ವಿರುದ್ಧ ಮತ ಚಲಾಯಿಸಿದ್ದಾರೆ.
ಪ್ರಸ್ತುತ ಅವಿಶ್ವಾಸ ಗೊತ್ತುವಳಿ ವಿಫಲವಾಗಿರುವುದರಿಂದ, 6 ತಿಂಗಳ ವರೆಗೆ ಸರಕಾರ ಸುರಕ್ಷಿತವಾಗಿರಲಿದೆ. ಗಾಜಾ ಪಟ್ಟಿಯಲ್ಲಿ ಯುದ್ಧ ತೀವ್ರಗೊಂಡಿ ರುವ ಹಿನ್ನೆಲೆಯಲ್ಲಿ ಧಾರ್ಮಿಕವಾದಿಗಳ ಸೇನಾ ಸೇವೆ ಕಡ್ಡಾಯಗೊಳಿಸಲು ಮುಂದಾಗಿರುವುದಕ್ಕೆ ಧಾರ್ಮಿಕ ವಾದಿ ಪಕ್ಷಗಳು ಸರಕಾರದ ವಿರುದ್ಧ ತಿರುಗಿಬಿದ್ದಿವೆ.




