ಬದಿಯಡ್ಕ: ಶೇಣಿ ಪಟ್ಲ ನಿವಾಸಿ ಚಿತ್ರಕಲಾ(37) ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಬಗ್ಗೆ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಚಿತ್ರಕಲಾ ತನ್ನ 14ವರ್ಷದ ಪುತ್ರ ಮತ್ತು 3ವರ್ಷ ಪ್ರಾಯದ ಪುತ್ರಿಯೊಂದಿಗೆ ಮೇ 31ರಂದು ಬೆಳಗ್ಗೆ ಪೆರ್ಲ ಪೇಟೆಗೆ ತೆರಳುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದು, ನಂತರ ಮನೆಗೆ ವಾಪಸಾಗಿಲ್ಲ ಎಂದು ಪತಿ ಗಂಗಾಧರ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಇವರ ಮೊಬೈಲ್ ಕರ್ನಾಟಕದ ಟವರ್ ಸಿಗ್ನಲ್ ನೀಡುತ್ತಿರುವುದರಿಂದ ತನಿಖೆ ಕರ್ನಾಟಕಕ್ಕೆ ವಿಸ್ತರಿಸಲಾಗಿದೆ.




