ಕಾಸರಗೋಡು: ಪರೋಟಾ ಗಂಟಲಲ್ಲಿ ಸಿಲುಕಿ ಯುವಕ ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ಪೆರಿಯದಲ್ಲಿ ನಡೆದಿದೆ. ಇಲ್ಲಿನ ಪೆರಿಯೋಕಿ ನಿವಾಸಿ, ದಿ. ಕುಞÂರಾಮನ್ ಎಂಬವರ ಪುತ್ರ ಶಿನೋಜ್(41)ಮೃತಪಟ್ಟವರು. ಕಣ್ಣೂರಿನ ಎಳಿಯಾವೂರ್ ಎಂಬಲ್ಲಿ ಹೋಟೆಲ್ ಕೆಲಸ ನಿರ್ವಹಿಸುತ್ತಿದ್ದ ಇವರು, ವಾಸಸ್ಥಳದಲ್ಲಿನ ಶೌಚಗೃಹದ ಸನಿಹ ಕುಸಿದು ಬಿದ್ದಿದ್ದರು. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಪ್ರಯೋಜನವಗಿರಲಿಲ್ಲ. ಮೃತದೇಹ ಶವಮಹಜರು ನಡೆಸಿದಾಗ ಪರೋಟ ಗಂಟಲಲ್ಲಿ ಸಿಲುಕಿ ಉಸಿರಾಟ ಸಮಸ್ಯೆಯಿಂದ ಸಾವು ಸಂಭವಿಸಿರುವುದಾಗಿ ವರದಿಯಲ್ಲಿ ತಿಳಿಸಲಾಗಿತ್ತು. ಮೃತದೇಹ ಪೆರಿಯಾದ ಪೆರಿಯೋಕಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.




