ಮುಳ್ಳೇರಿಯ: ಗಾಡಿಗುಡ್ಡೆ ಸನಿಹದ ಮೊಟ್ಟೆಕುಂಜ ನಿವಾಸೊ ಶಾಂತಪ್ಪ ಪೂಜಾರಿ ಎಂಬವರ ಪುತ್ರಿ, ಮುಳ್ಳೇರಿಯ ಶಾಲೆಯ ಪ್ಲಸ್‍ಟು ವಿದ್ಯಾರ್ಥಿನಿ ಮನ್ವಿತಾ(17)ಎಂಬಾಕೆಯ ಮೃತದೇಹ ಮನೆಯ ಅಡುಗೆ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹ ಉನ್ನತ ಶವಮಹಜರಿಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಪ್ಲಸ್‍ಟು ಪರೀಕ್ಷಾ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಮನ್ವಿತ ಕೆಲವೊಂದು ವಿಷಯದಲ್ಲಿ ಅನುತ್ತೀರ್ಣಳಾಗಿದ್ದು, ಇದರಿಂದ ಮನನೊಂದು ಕೃತ್ಯವೆಸಗಿರಬೇಕೆಂದು ಸಂಶಯಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಬದಿಯಡ್ಕ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.



.jpeg)
