ಕಾಸರಗೋಡು: ನಗರದ ಚೌಕಿ ಪ್ರದೇಶದಲ್ಲಿ ಬಿದ್ದು ಸಿಕ್ಕಿದ ಒಂದು ಪವನು ತೂಕದ ಚಿನ್ನದ ಸರವನ್ನು ವಾರಸುದಾರರಿಗೆ ಹಸ್ತಂತರಿಸುವ ಮೂಲಕ ಇಲ್ಲಿನ ಆಟೋಚಾಲಕರ ಸಂಘ ಪ್ರಾಮಾಣಿಕತೆ ಮೆರೆದಿದೆ. ಶಾಸ್ತನಗರ ನಿವಸಿ ರಶೀದಾ ಎಂಬವರು ತಮ್ಮ ಒಂದು ಪವನು ತೂಕದ ಚಿನ್ನಾಭರಣ ಮಂಗಳವಾರ ಚೌಕಿಅಸುಪಸು ಕಳೆದುಕೊಂಡಿದ್ದು, ಇದು ಆಟೋಚಾಲಕ ಸುಲೈಮಾನ್ ಎಂಬವರಿಗೆ ಬಿದ್ದುಸಿಕ್ಕಿತ್ತು. ಚೌಕಿಯ ಆಟೋಚಾಲಕರ ಒಕ್ಕೂಟದ ಅಧ್ಯಕ್ಷ ಉದಯನ್ ಹಾಗೂ ಇತರ ಸದಸ್ಯರ ಸಹಾಯದಿಂದ ಚಿನ್ನದ ವಾರಸುದಾರರನ್ನು ಪತ್ತೆಹಚ್ಚಿದ್ದರು. ಕಾಸರಗೋಡು ನಗರಠಾಣೆ ಪೊಲೀಸರ ಉಪಸ್ಥಿತಿಯಲ್ಲಿ ವರಸುದರರನ್ನು ಠಾಣೆಗೆ ಕರೆಸಿ ಚಿನ್ನದ ಸರ ಹಸ್ತಾಂತರಿಸಲಾಯಿತು.






