ಕಾಸರಗೋಡು: ಖಾಸಗಿ ಜಾಗದಲ್ಲಿ ಸಸಿಗಳನ್ನು ನೆಟ್ಟುಬೆಳೆಸಿ ಮರಗಳನ್ನಾಗಿಸುವ ಕೇರಳ ಸರ್ಕಾರದ 'ಟ್ರೀ ಬ್ಯಾಂಕಿಂಗ್' ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಇದು ಖಾಸಗಿ ಭೂಮಿಯಲ್ಲಿ ಮರಗಳನ್ನು ಬೆಳೆಸುವ ಯೋಜನೆಯಾಗಿದ್ದು, ಮರ ಬೆಳೆಸುವ ಯೋಜನೆ ಉತ್ತೇಜಿಸಲು ಹಣಕಾಸಿನ ನೆರವನ್ನೂ ನೀಡಲಾಗುತ್ತಿದೆ.
ಸ್ವಂತವಾಗಿ ಜಾಗ ಹೊಂದಿರುವವರು ಅಥವಾ 15ವರ್ಷಗಳ ವರೆಗೆ ಗುತ್ತಿಗೆ ಆಧಾರದಲ್ಲಿ ಪಡೆದುಕೊಂಡಿರುವ ಜಾಗದವರು ಈ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಅರ್ಹರಾಗಿದ್ದು, ಸಾಮಾಜಿಕ ಅರಣ್ಯ ಇಲಖೆ ವಲಯ ಕಚೇರಿಯಲ್ಲಿ ಭೂ ಸಂಬಂಧಿತ ದಾಖಲೆಗಳೊಂದಿಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಶ್ರೀಗಂಧ, ತೇಗ, ಮಹಾಗನಿ, ಬೀಟೆ, ಹಲಸು ಸೇರಿದಂತೆ ವಿವಿಧ ಮರಗಳನ್ನು ಯೋಜನೆಗೆ ಪರಿಗಣಿಸಲಗಿದೆ. ಮರವಾಗಿ ಬೆಳೆಯಬಲ್ಲ ಸಸಿಗಳನ್ನು ನೆಟ್ಟು ಬೆಳೆಸುವ ವ್ಯಕ್ತಿಗಳಿಗೆ 15 ವರ್ಷಗಳವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. 15 ವರ್ಷಗಳು ಪೂರ್ಣಗೊಂಡ ನಂತರ, ಭೂಮಾಲೀಕರಿಗೆ ಸಾಮಾಜಿಕ ನೆರವು ನೀಡಲಾಗುತ್ತದೆ. ಅರಣ್ಯ ವಿಭಾಗ ಕಚೇರಿಯ ಅನುಮತಿಯೊಂದಿಗೆ, ಮರಗಳನ್ನು ವೈಯಕ್ತಿಕ ಬಳಕೆಗಾಗಿ ಕತ್ತರಿಸಬಹುದು ಅಥವಾ ಮಾರಾಟ ಮಾಡಬಹುದು. ಹೆಚ್ಚಿನ ಮಾಹಿತಿಯನ್ನು ಸಾಮಾಜಿಕ ಅರಣ್ಯ ವಿಭಾಗ, ವಲಯ ಅರಣ್ಯ ಕಚೇರಿಯಿಂದ ಪಡೆಯಬಹುದು. ಜೂನ್ 15 ರೊಳಗೆ ಅರ್ಜಿ ಸಲ್ಲಿಸಿಕೆಗೆ ಸಂಬಂಧಿತ ದಾಖಲೆಗಳನ್ನು ಆಯಾ ಸಾಮಾಜಿಕ ಅರಣ್ಯ ವಲಯ ಕಚೇರಿಗಳಿಗೂ ಸಲ್ಲಿಸಬೇಕು. ಯೋಜನೆಯ ವಿವರಗಳನ್ನು www.forest.kerala.gov.in ವೆಬ್‍ಸೈಟ್‍ನಲ್ಲಿ ಕಾಣಬಹುದು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(8547603836, 8547603838)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.






