ಕೈರೊ: ಇಸ್ರೇಲ್ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ನ ಮುಖ್ಯಸ್ಥ ಅಲಿ ಶದ್ಮನಿ ಮೃತಪಟ್ಟಿದ್ದಾರೆ ಎಂದು ಇರಾನ್‌ನ ಸರ್ಕಾರಿ ಸುದ್ದಿ ಮಾಧ್ಯಮ ವರದಿ ಮಾಡಿದೆ.
ತಮ್ಮ ಸೇನಾ ಮುಖ್ಯಸ್ಥನ ಹತ್ಯೆಗೆ ತೀವ್ರ ಪ್ರತೀಕಾರ ತೀರಿಸಿಕೊಳ್ಳುವುದಾಗಿ ರೆವಲ್ಯೂಷನರಿ ಗಾರ್ಡ್‌ನ ಸೈನಿಕರು ಪ್ರತಿಜ್ಞೆ ಮಾಡಿರುವುದಾಗಿ ವರದಿಯಾಗಿದೆ.
ಸೇನಾ ದಾಳಿಯಲ್ಲಿ ಶದ್ಮನಿ ಹತರಾಗಿರುವುದಾಗಿ ಜೂನ್ 17ರಂದು ಇಸ್ರೇಲ್ ಹೇಳಿತ್ತು. ಶದ್ಮನಿ ಅವರು ಅತ್ಯಂತ ಹಿರಿಯ ಸೇನಾ ಕಮಾಂಡರ್ ಆಗಿದ್ದಾರೆ.
ಇರಾನ್‌ನ ಪರಮಾಣು ಯೋಜನೆಗಳನ್ನು ನಿಲ್ಲಿಸುವಂತೆ ಅದನ್ನೇ ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿತ್ತು. ಕಳೆದ 14 ದಿನಗಳಿಂದ ನಡೆಯುತ್ತಿರುವ ಉಭಯ ರಾಷ್ಟ್ರಗಳ ನಡುವಿನ ಸೇನಾ ಸಂಘರ್ಷದಲ್ಲಿ ಅಮೆರಿಕವೂ ಮಧ್ಯಪ್ರವೇಶಿಸಿತ್ತು. ಆಪರೇಷನ್ ಮಿಡ್‌ನೈಟ್ ಹ್ಯಾಮರ್ ಎಂಬ ಹೆಸರಿನ ದಾಳಿ ನಡೆಸಿ ನಟಾನ್ಜ್ ಹಾಗೂ ಎಸ್‌ಫಹಾನ್‌ನಲ್ಲಿರುವ ಪರಮಾಣು ಘಟಕಗಳ ಮೇಲೆ ದಾಳಿ ನಡೆಸಿತ್ತು. ಇದಾದ ನಂತರ ಡೊನಾಲ್ಡ್ ಟ್ರಂಪ್ ಏಕಾಏಕಿ ಸಾಮಾಜಿಕ ಮಾಧ್ಯಮದಲ್ಲಿ ಕದನ ವಿರಾಮ ಘೋಷಿಸಿದ್ದರು.




