ನವದೆಹಲಿ: ಎರಡು ಸ್ಥಳಗಳ ನಡುವೆ ಕನಿಷ್ಠ ಟೋಲ್ ಪಾವತಿ ರಸ್ತೆಗಳ ಮಾಹಿತಿಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) 'ರಾಜಮಾರ್ಗ ಯಾತ್ರಾ' ಆಯಪ್‌ನಲ್ಲಿ ಮುಂದಿನ ತಿಂಗಳಿಂದ ದೊರೆಯಲಿದೆ.
'ಉದಾಹರಣೆಗೆ, ದೆಹಲಿಯಿಂದ ಲಖನೌಗೆ ಮೂರು ಮಾರ್ಗಗಳಿದ್ದು, ಇದರಲ್ಲಿ ಯಾವುದು ಉತ್ತಮ ಎಂಬ ಮಾಹಿತಿಯನ್ನು ಆಯಪ್ ನೀಡಲಿದೆ.
ಕಡಿಮೆ ಟೋಲ್ ಪಾವತಿ ರಸ್ತೆಯಲ್ಲಿ ಸಂಚರಿಸುವುದರಿಂದ ವಾಹನ ಸವಾರರಿಗೆ ಹಣ ಉಳಿತಾಯವಾಗಲಿದೆ' ಎಂದು ಭಾರತೀಯ ಹೆದ್ದಾರಿ ನಿರ್ವಹಣಾ ಕಂಪನಿ (ಐಎಚ್‌ಎಂಸಿಎಲ್) ಇಂಟೆಲಿಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಂನ ಮುಖ್ಯ ಯೋಜನಾಧಿಕಾರಿ ಅಮೃತ್ ಸಿಂಘಾ ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳ ಸಮಗ್ರ ಮಾಹಿತಿ, ಶೌಚಾಲಯ ಸೇರಿದಂತೆ ಮೂಲಸೌಲಭ್ಯ ಕುರಿತ ಸಮಸ್ಯೆಗಳ ಪರಿಹಾರಕ್ಕಾಗಿ 'ರಾಜಮಾರ್ಗ ಯಾತ್ರಾ' ಅಪ್ಲಿಕೇಷನ್ ಅಭಿವೃದ್ಧಿಪಡಿಸಲಾಗಿದೆ.




