ಕಾಸರಗೋಡು: ಐಸಿಎಆರ್-ಕೇಂದ್ರ ತೋಟ ಬೆಳೆ ಸಂಶೋಧನಾ ಸಂಸ್ಥೆ (ಸಿಪಿಸಿಆರ್‍ಐ)ವತಿಯಿಂದ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಕೇರಳ ಅರಣ್ಯ ಮತ್ತು ವನ್ಯಜೀವಿ ಇಲಾಖೆ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಿತು. 'ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು' ಈ ಬರಿಯ ವಿಶ್ವ ಪರಿಸರ ದಿನಾಚರಣೆಯ ಮುಕ್ಯ ಘೋಷಣೆಯಗಿತ್ತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿ ಮಾತನಾಡಿ, ಸಿಪಿಸಿಆರ್‍ಐನ ಸಂಶೋಧನಾ ಕೊಡುಗೆಗಳು ನಡಿಗೆ ಮಾದರಿಯಾಗಿದ್ದು, ಕೃಷಿ ಭವನಗಳು ಮತ್ತು ಸ್ಥಳೀಯ ಕೃಷಿ ಸಮುದಾಯಗಳನ್ನು ತಲುಪುವ ಅದರ ಯೋಜನೆಗಳು ಶ್ಲಾಘನೀಯ ಎಂದು ತಿಳಿಸಿದರು.
ಐಸಿಎಆರ್-ಸಿಪಿಸಿಆರ್‍ಐ ನಿರ್ದೇಶಕ ಡಾ. ಕೆ. ಬಾಲಚಂದ್ರ ಹೆಬ್ಬಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇರಳ ಸರ್ಕಾರದ ಹಸಿರು ಮಿಷನ್ ಸಂಸ್ಥೆಯನ್ನು "ಹಸಿರು ಕ್ಯಾಂಪಸ್" ಎಂದು ಗುರುತಿಸಿದೆ ಎಂದು ತಿಳಿಸಿದ ಅವರು, ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭ್ಯಾಸಗಳಲ್ಲಿ ಸಂಸ್ಥೆ ನಡೆಸುತ್ತಿರುವ ನಿರಂತರ ಉಪಕ್ರಮಗನ್ನು ಮುಂದುವರಿಸಲಿದೆ. ಪರಿಸರವನ್ನು ಕಲುಷಿತಗೊಳಿಸದೆ ಕೃಷಿ ಪ್ಲಾಸ್ಟಿಕ್‍ಗಳನ್ನು ವಿಲೇವಾರಿ ಮಾಡಲು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು. ಸುರತ್ಕಲ್‍ನ ಎನ್‍ಐಟಿಕೆಯ ಎಚ್‍ಎಜಿ ಪ್ರಾಧ್ಯಾಪಕ ಡಾ. ಅರುಣ್ ಎಂ. ಇಸ್ಲೂರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಅರಣ್ಯ ಉಪ ನಿಯಂತ್ರಕ ಬಿಜು ಮತ್ತು ಎಟಿಎಂಎ (ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ)ಯ ಯೋಜನಾ ಸಂಯೋಜಕ ಶಿವಾನಂದನ್. ಪ್ಲಾಸ್ಟಿಕ್ ಮುಕ್ತ ಭಾರತದತ್ತ ಪರಿವರ್ತನೆಯ ಮಹತ್ವ ತಿಳಿಸಿ, ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ಸಾಮೂಹಿಕ ಜಾಗೃತಿ ಅಗತ್ಯ ಎಂದು ತಿಳಿಸಿದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೇಂದ್ರದ ವಠಾರದಲ್ಲಿ ಸಸಿಗಳನ್ನು ನೆಡಲಾಯಿತು. ಸಂಸ್ಥೆ ವಿಜ್ಞಾನಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.
ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಕೆ. ಪೆÇನ್ನುಸ್ವಾಮಿ ಸ್ವಾಗತಿಸಿದರು. ಕಾಸರಗೋಡು (ಕೆವಿಕೆ) ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಮನೋಜ್‍ಕುಮಾರ್ ಟಿ.ಎಸ್ ವಂದಿಸಿದರು.





