ಕಾಸರಗೋಡು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾಞಂಗಾಡಿನ ಚಿನ್ಮಯ ವಿದ್ಯಾಲಯದಲ್ಲಿ ವಿವಿಧ ಕಾರ್ಯಕ್ರಮ ಜರುಗಿತು.'ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸೋಣ'ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಖ್ಯಾತ ಸಂಗೀತ ಶಿಕ್ಷಕ ವೆಳ್ಳಿಕೋತ್ ವಿಷ್ಣುಭಟ್ ಸಮಾರಂಭ ಉದ್ಘಾಟಿಸಿದರು. ವಿದ್ಯಾಲಯದ ಕಾರ್ಯದರ್ಶಿ ಬಿ.ಆರ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲೆ ಪಿ.ಕೆ ಮಿನಿ ಉಪಸ್ಥಿತರಿದ್ದರು. ನಿಗಮಾ ಟೀಚರ್, ಶಾಲಿನಾ, ಪ್ರೀತಿ, ಅಶ್ವತಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ವಿದ್ಯಾಲಯದ ಪ್ರಾಂಶುಪಾಲ ಸಿ. ಚಂದ್ರನ್ ಸ್ವಾಗತಿಸಿದರು. ಸೀಡ್ ಕೋರ್ಡಿನೇಟರ್ ಪ್ರಿಯ ವಂದಿಸಿದರು.






