ಕಾಸರಗೋಡು: ಇರಿಯಾ ಸರ್ಕಾರಿ ಪ್ರೌಢಶಾಲೆಯಲ್ಲಿ ಅಖಿಲ ಕೇರಳ ಫೋಟೋಗ್ರಫರ್ಸ್ ಅಸೋಸಿಯೇಶನ್(ಎಕೆಪಿಎ)ವತಿಯಿಂದ ನಡೆದ ವಿಶ್ವ ಪರಿಸರ ದಿನವನ್ನು ರಾಜ್ಯ ಉಪಾಧ್ಯಕ್ಷ ಸಜೀಶ್ ಮಣಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರಾಜ್ಯ ಸಮಿತಿ ಕಾರ್ಯದರ್ಶಿ ಹರೀಶ್ ಪಾಲಕುನ್ನು ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಿದರು. ಪಿಟಿಎ ಅಧ್ಯಕ್ಷ ಗಂಗಾಧರನ್ ಪಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಸುಗುಣನ್ ಇರಿಯಾ, ಜಿಲ್ಲಾ ಅರಣ್ಯ ಅಧಿಕಾರಿ ಮತ್ತು ಇತರರು ಶಾಲಾ ವಠಾರದಲ್ಲಿ ಸಸಿಗಳನ್ನು ನೆಟ್ಟರು. ಜಿಲ್ಲಾ ಕಾರ್ಯದರ್ಶಿ ರಾಜೇಂದ್ರನ್ ವಿ.ಎನ್, ಕೋಶಾಧಿಕಾರಿ ಪ್ರಜಿತ್ ಎನ್.ಕೆ., ಜಿಲ್ಲಾ ಪಿ.ಆರ್.ಓ ರಾಜೀವ್ ಸ್ನೇಹಾ, ರಾಜಪುರಂ ವಲಯದ ಅಧ್ಯಕ್ಷ ಸಿನು ಬಂದಡ್ಕ, ಕಾಞಂಗಾಡ್ ವಲಯದ ಅಧ್ಯಕ್ಷ ರಮೇಶನ ಮಾವುಂಗಲ್, ರಾಜಪುರಂ ಘಟಕದ ಅಧ್ಯಕ್ಷ ಸನ್ನಿ ಮಾಣಿಶ್ಯೇರಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶೀಕ್ಷಕಿ ಬಿಂದು ಸ್ವಾಗತಿಸಿದರು. ಶಾಲಾ ಇಕೋ ಕ್ಲಬ್ ಸಂಯೋಜಕ ರಾಜೇಶ್ ವಂದಿಸಿದರು.






