ಕಾಸರಗೋಡು: 110 ಕೆವಿ ಮೈಲಾಟಿ-ವಿದ್ಯಾನಗರ ಫೀಡರ್ ಸಾಮಥ್ರ್ಯ ಹೆಚ್ಚಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಜೂನ್ 5ರ ವರೆಗೆ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ, ವಿದ್ಯಾನಗರ, ಮುಳ್ಳೇರಿಯ, ಕುಬಣೂರು, ಮಂಜೇಶ್ವರ ಮುಂತಾದ 110 ಕೆ.ವಿ. ಉಪಕೇಂದ್ರಗಳು ಮತ್ತು ಅನಂತಪುರ, ಕಾಸರಗೋಡು ನಗರ, ಬದಿಯಡ್ಕ ಮತ್ತು ಪೆರ್ಲದ 33 ಕೆ.ವಿ ಸಬ್‍ಸ್ಟೇಶನ್ ವ್ಯಾಪ್ತಿಯ ವಿದ್ಯುತ್ ಸರಬರಾಜಿನಲ್ಲಿ ಭಾಗಶಃ ವ್ಯತ್ಯಯವಾಗುವ ಸಾಧ್ಯತೆಯಿರುವುದಾಗಿ ಮೈಲಾಟಿ ಲೈನ್ ನಿರ್ವಹಣಾ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






