ಕಾಸರಗೋಡು: ಅಂಬೇಡ್ಕರ್ ರಸ್ತೆಯಲ್ಲಿರುವ ಬೀರಂತಬೈಲು ಅಂಗನವಾಡಿಯ ಮಕ್ಕಳೊಂದಿಗೆ ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಷನ್ ಕಾಸರಗೋಡು ಪೂರ್ವ ಘಟಕವು ಪ್ರವೇಶೋತ್ಸವ ಆಚರಿಸಿಕೊಂಡಿತು.
ಮಕ್ಕಳಿಗೆ ಚಿತ್ರ ಬಿಡಿಸುವ ಪುಸ್ತಕಗಳು, ಕ್ರಯೋನ್ ಮತ್ತು ಸಿಹಿತಿಂಡಿಗಳನ್ನು ವಿತರಿಸಲಾಯಿತು.ಘಟಕದ ಅಧ್ಯಕ್ಷ ಅಜಿತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಾರ್ಡ್ ಕೌನ್ಸಿಲರ್ ವೀಣಾಕುಮಾರಿ ಅತಿಥಿಯಾಗಿ ಭಾಗವಹಿಸಿದ್ದರು. ಘಟಕದ ಕಾರ್ಯದರ್ಶಿ ಸುಜಿತ್, ಕೋಶಾಧಿಕಾರಿ ಮನೀಶ್, ಉಪಾಧ್ಯಕ್ಷ ಅಖಿಲ್,ಜತೆ ಕಾರ್ಯದರ್ಶಿ ರಾಜಶೇಖರ್, ಪಿಆರ್‍ಒ ಶ್ರೀಕಾಂತ್, ಜಿಲ್ಲಾ ಸಮಿತಿ ಸದಸ್ಯ ಸುರೇಶ್.ಬಿ.ಜೆ, ನ್ಯಾಚುರಲ್ ಕ್ಲಬ್ ಉಪ-ಸಂಯೋಜಕ ಸಂಜೀವ್ ರೈ, ದಿನೇಶ್ ಇನ್‍ಸೈಟ್ ಭಾಗವಹಿಸಿದ್ದರು. ಸಮಾರಂಭದಲ್ಲಿ ಅಂಗನವಾಡಿ ಶಿಕ್ಷಕಿ ರೇವತಿ ಸ್ವಾಗತಿಸಿ, ವಂದಿಸಿದರು.






