ನವದೆಹಲಿ: 'ಪಂಜಾಬ್‌ನೊಳಗೆ ಖಾಲಿಸ್ತಾನ ಎಂಬ ಸ್ವತಂತ್ರ ರಾಷ್ಟ್ರ ಸ್ಥಾಪಿಸಲು ಖಾಲಿಸ್ತಾನಿ ಉಗ್ರರು 1980ರ ದಶಕದ ಮಧ್ಯಭಾಗದಿಂದಲೂ ಪ್ರಯತ್ನಿಸುತ್ತಿದ್ದಾರೆ' ಎಂದು ಕೆನಡಾದ ಗುಪ್ತಚರ ಸಂಸ್ಥೆಯ ವರದಿ ತಿಳಿಸಿದೆ.
ಖಾಲಿಸ್ತಾನಿ ಉಗ್ರಗಾಮಿಗಳ ಒಂದು ಸಣ್ಣ ಗುಂಪು ದೇಣಿಗೆ ಸಂಗ್ರಹ ಮತ್ತು ಭಾರತದಲ್ಲಿ ಹಿಂಸಾ ಕೃತ್ಯಕ್ಕೆ ಯೋಜನೆ ರೂಪಿಸಲು ಕೆನಡಾವನ್ನು ನೆಲೆಯಾಗಿ ಬಳಸುವುದನ್ನು ಮುಂದುವರಿಸಿದೆ ಎಂದು 'ದಿ ಕೆನಡಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವಿಸಸ್' ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ.




