ಇಸ್ಲಾಮಾಬಾದ್: 'ದೀರ್ಘಕಾಲಿನ ಕಾರ್ಯಯಂತ್ರದ ಭಾಗವಾಗಿ ಪರಸ್ಪರ ಲಾಭವಾಗುವ ವ್ಯಾಪಾರ ಪಾಲುದಾರಿಕೆ ಹೊಂದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೀವ್ರ ಆಸಕ್ತಿ ಹೊಂದಿದ್ದಾರೆ' ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.
ಶ್ವೇತಭವನದಲ್ಲಿ ಬುಧವಾರ ನಡೆದ ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಅಸೀಂ ಮುನೀರ್ ಹಾಗೂ ಟ್ರಂಪ್ ಜೊತೆಗಿನ ಸಭೆಯ ಬಳಿಕ ಪಾಕ್ ಸೇನೆ ಸಾರ್ವಜನಿಕ ಸಂಪರ್ಕ ಆಂತರಿಕ ಸೇವೆ ನಿರ್ದೇಶನಾಲಯ (ಐಎಸ್‌ಪಿಆರ್)ವು ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.




