ಮಂಜೇಶ್ವರ: ಸೋಮವಾರ ಸುರಿದ ಭಾರೀ ಮಳೆಯಿಂದಾಗಿ ಮಂಜೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಯ 10ನೇ ಮೈಲ್‍ನ ಕೆ.ಕೆ. ಕಾಂಪೌಂಡ್ ಪ್ರದೇಶದಲ್ಲಿ ಭಾರಿ ಹಾನಿ ಸಂಭವಿಸಿದೆ. ಈ ಪ್ರದೇಶದಲ್ಲಿರುವ ನಾಸರ್ ಎಂಬುವವರ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.
ನೆರೆಮನೆ ವಾಸಿಗಳು ಹಾಗೂ ಊರವರು ಮತ್ತು ಎಸ್ ಡಿ ಪಿ ಐ ಕಾರ್ಯಕರ್ತರು ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡರು.
ಮಳೆಯಿಂದ ಮನೆಗೆ ಗಂಭೀರ ಹಾನಿಯಾದ ಪರಿಣಾಮ, ನಾಸರ್ ಅವರ ಕುಟುಂಬ ಬೀದಿಗೆ ಬಿದ್ದಂತಾಗಿದೆ. ತೀವ್ರ ಮಳೆಯಿಂದ ನೆರೆಪಾಯಾಗಿ ಭೂ ಕುಸಿತವೂ ಸಂಭವಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಮನೆ ಕಟ್ಟಡದ ಬಹುಪಾಲು ಭಾಗಗಳು ಸಂಪೂರ್ಣವಾಗಿ ಕುಸಿದಿದ್ದು, ಮನೆ ಬಳಸಲಾಗದ ಸ್ಥಿತಿಗೆ ತಲುಪಿದೆ.
ಘಟನೆಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಮನೆ ಪೂರ್ಣವಾಗಿಯೂ ಕುಸಿದು ಬಿದ್ದಿರುವ ಹಿನ್ನೆಲೆಯಲ್ಲಿ ಅವರ ಕುಟುಂಬ ತಾತ್ಕಾಲಿಕ ಆಶ್ರಯಕ್ಕಾಗಿ ಎದುರುನೋಡುವ ಸ್ಥಿತಿಯಲ್ಲಿದೆ.

.jpg)
