ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿನ 11ನೇ ವಾರ್ಡ್ ವ್ಯಾಪ್ತಿಯ ಬೆದ್ರಂಪಳ್ಳದಿಂದ ಬಲ್ತಕಲ್ಲು ಮೂಲಕ ಪಾಟ್ಲದಳ ವರೆಗಿನ ರಸ್ತೆ ಅಭಿವೃದ್ಧಿಯ ಕಾಮಗಾರಿ ಉದ್ಘಾಟನೆ ಬನದ ಪರಿಸರದಲ್ಲಿ ಸೋಮವಾರ ಜರಗಿತು. ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ಉದ್ಘಾಟಿಸಿ ಮಾತನಾಡಿ, ವಾರ್ಡ್ ಸದಸ್ಯರ ಬೇಡಿಕೆ ಪರಿಗಣಿಸಿ ಬಜೆಟ್ ಮೂಲಕ ಮಂಜೂರುಗೊಂಡ ಈ ರಸ್ತೆ ಫಲಾನುಭವಿಗಳಿಗೆ ಫಲಪ್ರದವಾಗಲಿ ಎಂದರು.
ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್ ಅಧ್ಯಕ್ಷತೆ ವಹಿಸಿದ್ದರು. ಎಣ್ಮಕಜೆ ಗ್ರಾ.ಪಂ.ಉಪಾಧ್ಯಕ್ಷೆ ರಮ್ಲ ಇಬ್ರಾಹಿಂ, ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಪಂ.ಸದಸ್ಯೆ ಕುಸುಮಾವತಿ ಸಭೆಯಲ್ಲಿ ಉಪಸ್ಥಿತರಿದ್ದರು.ಈ ಸಂದರ್ಭ ಯೋಜನೆಗೆ ಹಣ ಮಂಜೂರುಗೊಳಿಸಿದ ಶಾಸಕರನ್ನು ರಸ್ತೆ ಫಲಾನುಭವಿಗಳ ಪರವಾಗಿ ಸನ್ಮಾನಿಸಲಾಯಿತು. ಪಂ.ಸಹಾಯಕ ಅಭಿಯಂತ ಶ್ರೀನಾಥ್ ವರದಿ ಮಂಡಿಸಿದರು. ವಾರ್ಡ್ ಸದಸ್ಯ ರಾಧಾಕೃಷ್ಣ ನಾಯಕ್ ಜೆ.ಎಸ್. ಶೇಣಿ ಸ್ವಾಗತಿಸಿ, ಶ್ರೀಧರ್ ಮಾಸ್ತರ್ ಕುಕ್ಕಿಲ ವಂದಿಸಿದರು.




.jpg)
.jpg)
