ಕುಂಬಳೆ: ಕುಂಬಳೆ ಸೀಮೆಯ ನಾಲ್ಕು ಪ್ರಧಾನ ಹವ್ಯಕ ಮಠಗಳಲ್ಲಿ ಒಂದಾದ ಕಾನ ಶ್ರೀಶಂಕರನಾರಾಯಣ ಮಠ-ಶ್ರೀಧೂಮಾವತಿ ಅಮ್ಮನವರ ದೈವಕ್ಷೇತ್ರಕ್ಕೆ ಸಂಬಂಧಿಸಿ ಮಠದ ಶ್ರೀಧೂಮಾವತೀ ದೈವದ ಭಂಡಾರ ಕೊಟ್ಟಗೆಯ ಮುಂಭಾಗದಲ್ಲಿ ಮೂಡ ಕೋಣಮ್ಮೆ ವೆಂಕಟರಮಣ ಭಟ್ಟರು ದಾನವಾಗಿ ನೀಡಿದ ಭೂಮಿಯಲ್ಲಿ ಶ್ರೀ ರಾಮಚಂದ್ರಾಪುರ ಸಂಸ್ಥಾನದವರ ಮೊಕ್ಕಾಂ ಮತ್ತು ಕಾನ ಮಠದ ಭಜಕರ ಉಪಯೋಗಕ್ಕಾಗಿ ಗುರುಭವನ ಸಹಿತವಾದ ಸಭಾಭವನದ ಕಾಮಗಾರಿ ಪ್ರಾರಂಭಕ್ಕೆ ಶಂಕುಸ್ಥಾಪನೆ ಬುಧವಾರ ಬೆಳಿಗ್ಗೆ ನೂರಾರು ಶ್ರದ್ದಾವಂತರ ಸಮಕ್ಷಮ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಕ್ಷೇತ್ರಾಚಾರ್ಯ ಗುಣಾಜೆ ಭಟ್ ಅವರ ನೇತೃತ್ವದಲ್ಲಿ ಗಣಪತಿ ಪೂಜೆ, ಪ್ರಾರ್ಥನೆ, ವಾಸ್ತುಪೂಜೆ, ಪ್ರಾರ್ಥನೆ,ಶ್ರೀದೇವರಿಗೆ ಪೂಜೆ, ಶಂಕುಸ್ಥಾಪನೆ ನಡೆಯಿತು. ಮುಖ್ಯ ಅರ್ಚಕರಾದ ಕೇಶವಪ್ರಸಾದ್ ನಾಣಿತ್ತಿಲು, ಜೀರ್ಣಓದ್ದಾರ ಸಮಿತಿ ಅಧ್ಯಕ್ಷ ಬಲರಾಮ ಭಟ್ ಕಾಕುಂಜೆ, ಕಾರ್ಯದರ್ಶಿ ಮಹೇಶ್ ಭಟ್ ಕೆ., ಕೋಶಾಧಿಕಾರಿ ರವಿಶಂಕರ ಭಟ್ ಉಪ್ಪಂಗಳ, ಶ್ರೀ ರಾಮಚಂದ್ರಾಪುರ ಮಠದ ಪ್ರತಿನಿಧಿಗಳಾದ ಯು.ಎಸ್.ಗಣೇಶ್ ಭಟ್ ಶಿರಂಕಲ್ಲು, ಮಾತೃತ್ವಂ ಪ್ರಧಾನೆ ಈಶ್ವರಿ ಬೇರ್ಕಡವು, ವಲಯಾಧ್ಯಕ್ಷ ಡಾ.ಡಿ.ಪಿ.ಭಟ್ ಕುಂಬಳೆ, ಮುಳ್ಳೇರಿಯ ಮಂಡಲ ಸಂಘಟನಾ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಶೇಡಿಗುಮ್ಮೆ, ಸ್ಥಳ ದಾನಿ ಮೂಡುಕೋಣಮ್ಮೆ ವೆಂಕಟರಮಣ ಭಟ್ ದಂಪತಿಗಳು, ಡಾ.ನವೀನಕೃಷ್ಣ, ಮುಖಂಡರಾದ ಸತ್ಯಶಂಕರ ಭಟ್ ಹಿಳ್ಳೆಮನೆ,ಶಿವಶಂಕರ ಭಟ್ ಬೋನಂತಾಯ, ಹೊಸದಿಗಂತ ಸಿಇಒ ಪ್ರಕಾಶ್ ಪಿ.ಎಸ್., ಸಂಪಾದಕ ಪ್ರಕಾಶ್ ಇಳಂತಿಲ, ಕೆ.ಎಸ್.ಇ.ಬಿ.ಹಿರಿಯ ಅಭಿಯಂತರ ನಾಗರಾಜ ಭಟ್, ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಮಹಾಲಿಂಗೇಶ್ವರ ರಾಜ್, ಕರ್ನಾಟಕ ಬ್ಯಾಂಕ್ ನಿವೃತ್ತ ಜಿ.ಎಂ.ಏಳ್ಕಾನ ಮಹಾಲಿಂಗೇಶ್ವರ ಭಟ್.ಮೇಣ ಗೋಪಾಲಕೃಷ್ಣ ಮಧುವನ, ಮಹೇಶ್ ಭಟ್ ಕಟ್ಟಂಪಾಡಿ, ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.







