ಕಾಸರಗೋಡು: ರಾಜ್ಯ ಸರ್ಕಾರ ಮತ್ತು ರಾಜಭವನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತ ಮಾತೆಯ ಭಾವಚಿತ್ರವು ಕೇಸರಿ ಧ್ವಜ ಹಿಡಿದ ಮಹಿಳೆಯದ್ದಾಗಿತ್ತು ಎಂಬುದಾಗಿ ಶಿಕ್ಷಣ ಸಚಿವ ಶಿವನ್‍ಕುಟ್ಟಿ ಅವರ ಹೇಳಿಕೆ ಮಹಿಳಾ ವಿರೋಧಿ ಹಾಗೂ ಸಂಕುಚಿತ ಭಾವನೆಯಿಂದ ಕುಡಿರುವುದಾಗಿ ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷೆ ಎಂ.ಎಲ್ ಅಶ್ವಿನಿ ತಿಳಿಸಿದ್ದಾರೆ.
ವಿದೇಶದಲ್ಲಿ ಹುಟ್ಟಿಕೊಂಡ ಕಮ್ಯುನಿಸ್ಟ್ ಸಿದ್ಧಾಂತವು ಭಾರತಾಂಬೆ ಹಾಗೂ ರಾಷ್ಟ್ರೀಯ ಚಿಂತನೆಯನ್ನು ಎಂದಿಗೂ ಮೈಗೂಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. 1947 ರಲ್ಲಿ, ಭಾರತವನ್ನು 18 ಭಾಗಗಳಾಗಿ ವಿಭಜಿಸಲು ಒತ್ತಾಯಿಸಿರುವುದಲ್ಲದೆ, ಸ್ವಾತಂತ್ರ್ಯ ದಿನದಂದು ಕಮ್ಯುನಿಸ್ಟರು ಕರಾಳ ದಿನವನ್ನು ಆಚರಿಸಿದರು. ಕಮ್ಯುನಿಸಂನ ಕೊನೆಯ ರಾಜ್ಯವಾದ ಕೇರಳದ ಜನರು ವಿಭಜನೆ, ಪ್ರತ್ಯೇಕತಾವಾದ ಮತ್ತು ಭಾರತ ವಿರೋಧಿ ಕಮ್ಯುನಿಸ್ಟ್ ಸಿದ್ಧಾಂತವನ್ನು ತಿರಸ್ಕರಿಸುವ ಸಮಯ ದೂರವಿಲ್ಲ. ಆಡಳಿತ ವೈಫಲ್ಯದೊಂದಿಗೆ ಸರ್ಕಾರದ ಸಾಧನೆಗಳನ್ನು ಎತ್ತಿತೋರಿಸಲು ಪಿಣರಾಯಿ ವಿಜಯನ್ ಸರ್ಕಾರಕ್ಕೆ ಸಾಧ್ಯವಾಗದಿರುವಾಗ ಉದ್ದೇಶಪೂರ್ವಕವಾಗಿ ಭಾರತಾಂಬೆ ವಿವಾದವನ್ನು ಸೃಷ್ಟಿಸುತ್ತಿದೆ. ಈ ,ಊಲಕ ಸಾರ್ವಜನಿಕ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಅಶ್ವಿನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.





