ಪೆರ್ಲ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಆರೋಗ್ಯ ಜಾಗೃತಿ ಮೂಡಿಸುವ 'ಯೋಗಾಭಿನಮನಂ' ನಾಲ್ಕು ತಿಂಗಳ ಯೋಗ ಕಾರ್ಯಕ್ರಮ ಜೂ. 21ರಂದು ಪೆರ್ಲದ ಶ್ರೀ ಭಾರತೀ ಸದನದಲ್ಲಿ ಆರಂಭಗೊಳ್ಳಲಿದೆ.
ಪಳ್ಳತ್ತಡ್ಕದ ಸಾಂದೀಪನಿ ಯೋಗ ಸೇವಾಲಯ, ಉಕ್ಕಿನಡ್ಕದ ಆಯುರ್ವೇದ ಆಸ್ಪತ್ರೆ, ಭಾರತೀಯ ಮಜ್ದೂರ್ ಸಂಘ ಪೆರ್ಲ, ಬಾಲಗೋಕುಲ, ಭಜನಾ ತಂಡ, ಶಾಲಾ-ಕಾಲೇಜು, ವಿವಿಧ ಸಂಘಟನೆಗಳ ಸಹಕರದೊಂದಿಗೆ ಯೋಗ ಕಾರ್ಯಕ್ರಮ ಜರುಗಲಿದೆ. ಪುರುಷರಿಗೆ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಯೋಗ ನಡೆಯಲಿದೆ. ಯೋಗಾಭಿನಮನಂ ಕಾರ್ಯಕ್ರಮದ ಪೂರ್ವಭಾವಿಯಾಗಿ ಪೆರ್ಲ ಶ್ರೀ ಶಂಕರಸದನದಲ್ಲಿ ಈಗಾಗಲೇ ಒಂದು ವಾರದ ಯೋಗಾಸನ ತರಬೇತಿ ಶಿಬಿರ ಆಯೋಜಿಸಲಾಗಿದೆ. 21ರಂದು ಸಂಜೆ 4.30ಕ್ಕೆ ಪೆರ್ಲ ಶ್ರೀ ಭಾರತೀ ಸದನದಲ್ಲಿ ಯೋಗಾಭಿನಮನಂ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು
ಯೋಗಾಭಿನಮನಂ'ಸಮಾರೋಪ ಸಮಾರಂಭ ಸೆಪ್ಟಂಬರ್ 21ರಂದು ಬದಿಯಡ್ಕದ ಭಾರತೀ ನಗರದಲ್ಲಿ ಜರುಗಲಿದೆ. ಈ ಸಂದರ್ಭ ಸಾಮೂಹಿಕ ಸೂರ್ಯನಮಸ್ಕಾರ ಯಜ್ಞ, ಯೋಗ ತಂಡಗಳಿಂದ ಯೋಗ ಪ್ರದರ್ಶನ, ಸ್ಪರ್ಧಾಳುಗಳಿಗೆ ಪ್ರಮಾಣಪತ್ರ ವಿತರಣೆ ನಡೆಯುವುದು.





