ಕಾಸರಗೋಡು: 'ಪೆÇೀಶ್' ಕಾಯ್ದೆಯನ್ವಯ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಂತರಿಕ ಸಮಿತಿಗಳನ್ನು ಬಲಪಡಿಸಬೇಕಾದ ಅಗತ್ಯವಿದೆ ಎಂದು ಮಹಿಳಾ ಆಯೋಗದ ಸದಸ್ಯೆ, ವಕೀಲೆ ಪಿ.ಪಿ. ಕುಞËಯಿಷಾ ತಿಳಿಸಿದ್ದಾರೆ.
ಅವರು ಕಾಸರಗೋಡು ಜಿಲ್ಲಾಧಿಕಾರಿ ಸಮ್ಮೇಳನ ಸಭಾಂಗಣದಲ್ಲಿ ನಡೆದ ಮಹಿಳಾ ಆಯೋಗ ಸಿಟ್ಟಿಂಗ್ ನಂತರ ಮಾಧ್ಯಮದವರಿಗೆ ಮಾಹಿತಿ ನೀಡಿದರು. ಕೆಲಸ ಮಾಡುವ ಮಹಿಳೆಯರ ಸಮಸ್ಯೆಗಳ ಕುರಿತು ಅನೇಕ ದೂರುಗಳು ಆಯೋಗದ ಮುಂದೆ ಬರುತ್ತಿರುವ ಹಿನ್ನೆಲೆಯಲ್ಲಿ ಮಹಿಳಾ ಆಯೋಗವು 'ಪೋಷ್ ಕಾಯ್ದೆ-2013' ರ ಅಧೀನದಲ್ಲಿ ಐಸಿಗಳ ಕಾರ್ಯನಿರ್ವಹಣೆಯನ್ನು ಮೌಲ್ಯಮಾಪನ ಮಾಡಲು ನಿರ್ಧರಿಸಿದೆ. ಇದರ ಭಾಗವಾಗಿ, ಎಲ್ಲಾ ಜಿಲ್ಲೆಗಳಲ್ಲಿ 'ಪೋಶ್'ಕಾಯ್ದೆಯ ಕುರಿತು ವಿಚಾರ ಸಂಕಿರಣ ನಡೆಸಲಾಗುವುದು.
ಜೂನ್ 28 ಮತ್ತು 29 ರಂದು ವಲಿಯಪರಂಬ ಗ್ರಾಮ ಪಂಚಾಯಿತಿಯಲ್ಲಿ ಕರಾವಳಿ ಶಿಬಿರವನ್ನು ಆಯೋಜಿಸಲಾಗುವುದು. ಮೊದಲ ದಿನ, ಕರಾವಳಿ ಪ್ರದೇಶದ ಮನೆಗಳು ಎರಡನೇ ದಿನ ಇಲಾಖಾ ಅಧಿಕಾರಿಗಳ ಸಂಗಮ ಸಭೆಯ ಜತೆಗೆ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಕರಾವಳಿ ಪ್ರದೇಶದ ಸರ್ಕಾರಿ ಸೇವೆಗಳು ಮತ್ತು ಕೌಟುಂಬಿಕ ಹಿಂಸಾಚಾರ ತಡೆ ಕಾಯ್ದೆಗೆ ಸಂಬಂಧಿಸಿದ ವಿಚಾರ ಸಂಕಿರಣ ನಡೆಯುವುದು. ಶಿಬಿರದಲ್ಲಿ ಲಭ್ಯವಾಗುವ ದೂರುಗಳು ಮತ್ತು ಇವುಗಳ ಪರಿಹಾರಗಳ ಕುರಿತು ವಿವರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಅದಾಲತ್‍ನಲ್ಲಿ 45 ದೂರುಗಳನ್ನು ಪರಿಗಣಿಸಲಾಗಿದ್ದು, ಇವುಗಳಲ್ಲಿ. 24 ದೂರುಗಳಿಗೆ ಪರಿಹಾರ ಕಂಡುಕೊಳ್ಳಲಾಯಿತು. 21 ದೂರುಗಳನ್ನು ಮುಂದಿನ ಅದಾಲತ್‍ನಲ್ಲಿ ಪರಿಗಣಿಸಲು ತೀರ್ಮಾನಿಸಲಾಯಿತು. ಇದರ ಜತೆಗೆ ಒಂದು ಹೊಸ ದೂರನ್ನು ಸ್ವೀಕರಿಸಲಾಯಿತು. ವಕೀಲೆ ಇಂದಿರಾ, ಕುಟುಂಬ ಸಲಹೆಗಾರರಾದ ರಮ್ಯಾ, ಮಹಿಳಾ ಕೋಶದ ಎಎಸ್‍ಐ ಶಾಂತಾ ಮತ್ತು ಸಿ.ಪಿ ಯು ಜಯಶ್ರೀ ಉಪಸ್ಥಿತರಿದ್ದರು.





