ಚೆನ್ನ್ಯೆ :ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಊಟಿಯಲ್ಲಿರುವ ತಮ್ಮ ಐಷಾರಾಮಿ ವಿಲ್ಲಾ 'ಹೈಡ್‌ಅವೇ' ಅನ್ನು ಸಾರ್ವಜನಿಕರಿಗೆ ತೆರೆದಿದ್ದಾರೆ. ಈ ವಿಲ್ಲಾ ಪ್ರತಿ ರಾತ್ರಿಗೆ ₹37,000 ದರದಲ್ಲಿ ಲಭ್ಯವಿದ್ದು, ಅವರ ಕುಟುಂಬದ ವೈಯಕ್ತಿಕ ಸ್ಪರ್ಶ, ಸಿನಿಮಾ ಸ್ಮರಣಿಕೆಗಳು ಮತ್ತು ನಾಟಿ ಶೈಲಿಯ ಕೇರಳ ಊಟವನ್ನು ಒಳಗೊಂಡಿದೆ.
ಪ್ರಸಿದ್ಧ ಮಲಯಾಳಂ ನಟ ಮೋಹನ್ ಲಾಲ್ ಅವರು ಈಗ ಊಟಿಯಲ್ಲಿರುವ ತಮ್ಮ ಐಷಾರಾಮಿ ವಿಲ್ಲಾವನ್ನು ಸಾರ್ವಜನಿಕ ವಾಸ್ತವ್ಯಕ್ಕಾಗಿ ತೆರೆದಿದ್ದಾರೆ. ಪ್ರಕೃತಿ ಮಧ್ಯೆ ವಿಶ್ರಾಂತಿದಾಯಕ ಮತ್ತು ವಿಶಿಷ್ಟ ಅನುಭವವನ್ನು ಬಯಸುವ ಪ್ರವಾಸಿಗರಿಗೆ 'ಹೈಡ್‌ಅವೇ' ಎಂಬ ಹೆಸರಿನ ಈ ಸುಂದರ ವಿಲ್ಲಾದಲ್ಲಿ ನಿಜವಾದ ರಾಯಲ್‌ಟಿಗೇನೂ ಕಡಿಮೆ ಇಲ್ಲ. ಈ ಬಂಗಲೆ ಊಟಿ ಪಟ್ಟಣದ ಹೃದಯ ಭಾಗದಿಂದ ಕೇವಲ 15 ನಿಮಿಷದ ದೂರದಲ್ಲಿದ್ದು, ಖಾಸಗಿ ನಿರ್ವಹಣೆಯೊಂದಿಗೆ ಪ್ರವಾಸಿಗರನ್ನು ಆತಿಥ್ಯಪೂರ್ವಕವಾಗಿ ಸ್ವಾಗತಿಸುತ್ತದೆ. ಹೈಡ್‌ಅವೇ ಹೆಸರಿನ ಈ ಕನಸಿನ ವಿಲ್ಲಾದಲ್ಲಿ ತಂಗಲು ಒಂದು ದಿನಕ್ಕೆ ರೂ. 37,000 (ತೆರಿಗೆಗಳನ್ನು ಹೊರತುಪಡಿಸಿ) ದರ ಹೊಂದಿದೆ. ಈ ಬಂಗಲೆ ಮೂರು ವಿಶಿಷ್ಟ ಮಲಗುವ ಕೋಣೆಗಳನ್ನು ಹೊಂದಿದ್ದು, ಪ್ರತಿಯೊಂದಕ್ಕೂ ಮೋಹನ್ ಲಾಲ್ ಅವರ ಕುಟುಂಬ ಸದಸ್ಯರ ವೈಯಕ್ತಿಕ ಸ್ಪರ್ಶವಿದೆ. ಒಂದು ಮಗಳು ವಿಸ್ಮಯ ಅವರ ಪ್ರಕೃತಿ ಪ್ರೀತಿಯ ಪ್ರತಿಬಿಂಬ, ಇನ್ನೊಂದು ಪುತ್ರ ಪ್ರಣವ್ ಮೋಹನ್ ಲಾಲ್ ಅವರ ಸಂವೇದನಶೀಲ ಕಲಾಭಿವೃದ್ಧಿಗೆ ಸಲ್ಲುವ ಗೌರವ.

ಊಟಿಯ ವಿಲ್ಲಾದಿಂದ ದುಬೈದ ಬುರ್ಜ್ ಖಲೀಫಾ ಅಪಾರ್ಟ್‌ಮೆಂಟ್‌ವರೆಗೆ
ಇದು ಕೇವಲ ಒಂದು ವಾಸಸ್ಥಳವಲ್ಲ, ಸಿನಿಮಾ ಚರಿತ್ರೆಯ ಪ್ರತಿಬಿಂಬವೂ ಹೌದು. ಪ್ರತಿ ಕೋಣೆಯೂ ಅವರ ಕುಟುಂಬದ ನೆನಪಿನಿಂದ ತುಂಬಿದೆ. ಅಲ್ಲದೆ, ಅವರು ಹೊಂದಿರುವ ₹35 ಕೋಟಿ ಮೌಲ್ಯದ ಬುರ್ಜ್ ಖಲೀಫಾ ಅಪಾರ್ಟ್‌ಮೆಂಟ್, ಕೊಚ್ಚಿಯಲ್ಲಿ 9,000 ಚದರ ಅಡಿಯ ಡ್ಯೂಪ್ಲೆಕ್ಸ್ ವಾಸಸ್ಥಳ, ಕೋಟಿ ಮೌಲ್ಯದ ಕಾರು ಸಂಗ್ರಹ, ಮತ್ತು ಪ್ರೀಮಿಯಂ ಬ್ರ್ಯಾಂಡ್‌ಗಳ ಗಡಿಯಾರಗಳ ಮಾಲಿಕತ್ವ. ಈ ಎಲ್ಲವೂ ಕಲೆ ಸೇರಿ, ಅವರು ಏಕೆ ಭಾರತೀಯ ಸಿನಿಮಾ ಲೋಕದ ನಿಜವಾದ ರಾಜರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತವೆ. ಇತ್ತೀಚೆಗೆ, ಮಾಲಿವುಡ್ ನಟ ಮಮ್ಮುಟ್ಟಿ ಕೊಚ್ಚಿಯಲ್ಲಿ ತಮ್ಮ ನಿವಾಸವಾದ ಮಮ್ಮುಟ್ಟಿ ಹೌಸ್ ಅನ್ನು ಸಾರ್ವಜನಿಕ ವಾಸ್ತವ್ಯಕ್ಕಾಗಿ ತೆರೆದರು. ಇದರ ಬೆಲೆ ಪ್ರತಿ ರಾತ್ರಿಗೆ 75,000 ರೂ. ಆಗಿತ್ತು.

ಸಿನೆಮಾ ಮತ್ತು ಸಂಸ್ಕೃತಿಗೆ ಮನಸೆಳೆಯುವ ಅಲಂಕಾರ
ಈ ವಿಲ್ಲಾದ "ದಿ ಫ್ಯಾಮಿಲಿ ರೂಮ್" ಅನ್ನುವುದು ಸುಮಾರು 300 ಮಲಯಾಳಂ ಸಿನಿಮಾ ಚಿಹ್ನೆಗಳಿಂದ ಅಲಂಕರಿಸಲಾಗಿದ್ದು, ಅದೊಂದು ಲೈವಿಂಗ್ ಸಿನೆಮಾ ಮ್ಯೂಸಿಯಂ ಎನ್ನಬಹುದು. ಬಾರ್ ಮತ್ತು ಮಿನಿ ಮ್ಯೂಸಿಯಂ ಬಳ್ಳಿಯಂತೆ ಕೆಲಸ ಮಾಡುತ್ತಿರುವ "ದಿ ಗನ್ ಹೌಸ್" ಭಾಗದಲ್ಲಿ, ಬರೋಜ್, ಮರಕ್ಕರ್ ಸೇರಿದಂತೆ ಹಲವಾರು ಚಲನಚಿತ್ರಗಳಿಂದ ಸ್ಮರಣೀಯ ಅಂಶಗಳನ್ನು ಪ್ರದರ್ಶಿಸಲಾಗಿದೆ. ಇಲ್ಲಿ ಬರುವ ಪ್ರವಾಸಿಗರಿಗೆ ವಿಶೇಷತೆಯೇನಂದರೆ , 25 ವರ್ಷಗಳಿಂದ ಮೋಹನ್ ಲಾಲ್ ಕುಟುಂಬದೊಂದಿಗೆ ಸೇವೆ ಸಲ್ಲಿಸುತ್ತಿರುವ ಶೆಫ್ ತಯಾರಿಸುವ ನಾಟಿ ಶೈಲಿಯ ಶುದ್ಧ ಕೇರಳ ಆಹಾರ ಲಭ್ಯವಾಗಲಿದೆ.

ಸಿನಿಮಾ ಯಶಸ್ಸಿನಿಂದ ಐಷಾರಾಮಿ ಜೀವನದವರೆಗೆ
1978ರಲ್ಲಿ ತಿರನೊಟ್ಟಂ ಚಿತ್ರದಿಂದ ಆರಂಭಗೊಂಡ ಅವರ ಸಿನಿ ಜರ್ನಿ ಬಳಿಕ ಅವರು ರಾಜವಿಂಟೆ ಮಗನ್ ಮೂಲಕ ಮನೆಮಾತಾದರು. ಇಲ್ಲಿವರೆಗೆ ಮೋಹನ್ ಲಾಲ್ 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಪದ್ಮಶ್ರೀ, ಪದ್ಮಭೂಷಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ನಟರಷ್ಟೇ ಅಲ್ಲ, ನಿರ್ಮಾಪಕ, ಗಾಯಕ, ನಿರ್ದೇಶಕ ಮತ್ತು ಸ್ವಂತ ಪೋಸ್ಟ್-ಪ್ರೊಡಕ್ಷನ್ ಸ್ಟುಡಿಯೋ ಹೊಂದಿರುವ ಬಹುಮುಖ ಪ್ರತಿಭೆಯ ವ್ಯಕ್ತಿ. ಇವರದ್ದು ರೂ. 421 ಕೋಟಿ ಮೌಲ್ಯದ ಜೀವನಶೈಲಿ!

ಕೊಚ್ಚಿಯ 'ಪ್ಯಾಲೇಸ್'
ಮೋಹನ್ ಲಾಲ್ ಅವರ ಕೊಚ್ಚಿಯ ವಾಸಸ್ಥಳ ಪ್ರಾಚೀನ ಪೀಠೋಪಕರಣ, ಆಧುನಿಕ ವಿನ್ಯಾಸ ಹಾಗೂ ವೈಯಕ್ತಿಕ ನೆನಪುಗಳಿಂದ ತುಂಬಿರುತ್ತದೆ. ಇಲ್ಲಿ ಅವರ ಪ್ರಶಸ್ತಿಗಳು ಹಾಗೂ ಅಭಿಮಾನಿಗಳಿಂದ ಪಡೆದ ಪತ್ರಗಳಿಗೆ ಒಂದು ವಿಶೇಷ ಕೋಣೆ. ತಂಜಾವೂರು ಕಲಾಕೃತಿಗಳು, ಚಿತ್ರಸ್ಮರಣಿಕೆಗಳ ಮೂಲಕ ಕಲಾ ಗ್ಯಾಲರಿ. ಓಪನ್ ಸ್ನಾನಕೋಣೆ ಮತ್ತು ಹೋಮ್ ಥಿಯೇಟರ್ ಇದೆ.

ಐಡೆಂಟಿಟಿ ಅಪಾರ್ಟ್‌ಮೆಂಟ್ - ಕಾನ್ಸೆಪ್ಟ್-ಬೇಸ್‌ಡ್ ಡ್ಯೂಪ್ಲೆಕ್ಸ್
2022ರಲ್ಲಿ ಅವರು ಕೊಚ್ಚಿಯ ಐಡೆಂಟಿಟಿ ಕಟ್ಟಡದಲ್ಲಿ 9,000 ಚದರ ಅಡಿಗಳ ಡ್ಯೂಪ್ಲೆಕ್ಸ್ ಅಪಾರ್ಟ್‌ಮೆಂಟ್ ಅನ್ನು ನವೀಕರಣ ಮಾಡಿದರು. ಇಲ್ಲಿ ಬಿಳಿ-ಬೂದು ಶೈಲಿಯ ಮ್ಯಾಟೆ ಫಿನಿಶ್ ಅಡುಗೆಮನೆ, ಕಲಾತ್ಮಕ ಟೇಬಲ್, ವಿನ್ಯಾಸ ಗ್ಯಾರೇಜ್ ಎಲ್ಲವೂ ಅವರ ಪತ್ನಿ ಸುಚಿತಾ ಅವರಿಂದ ರೂಪುಗೊಂಡಿರುವ ವಿನ್ಯಾಸವಾಗಿದೆ.
ಬುರ್ಜ್ ಖಲೀಫಾದಲ್ಲೂ ಮನೆ: ₹35 ಕೋಟಿ ಲಕ್ಸುರಿ ಲೆವಲ್
ಬುರ್ಜ್ ಖಲೀಫಾದ 29ನೇ ಮಹಡಿಯಲ್ಲಿ ಇರುವ ಅವರ ಅಪಾರ್ಟ್‌ಮೆಂಟ್, ದುಬೈ ಸ್ಕೈಲೈನ್‌ಗಿಂತಲೂ ಹೆಚ್ಚು ಐಷಾರಾಮಿ. ಜೊತೆಗೆ ಅವರು PR HEIGHTSನಲ್ಲಿ 3BHK ಫ್ಲಾಟ್, ಈಜುಕೊಳ, ಯೋಗ ರೂಂ, ಟೆನಿಸ್ ಕೋರ್ಟ್ ಹಾಗೂ ಗ್ರಂಥಾಲಯ ಹೊಂದಿರುವ ಅಪಾರ್ಟ್‌ಮೆಂಟ್ ಕೂಡ ಹೊಂದಿದ್ದಾರೆ.

ಡ್ರೀಮ್ ಕಾರ್ ಸಂಗ್ರಹ , ಮೋಹನ್ ಲಾಲ್ ಅವರ ಗ್ಯಾರೇಜ್ ನಲ್ಲಿ ಏನೇನಿದೆ.
- ಲ್ಯಾಂಬೋರ್ಘಿನಿ ಉರುಸ್ - ₹4 ಕೋಟಿ
- ರೇಂಜ್ ರೋವರ್ ಆಟೋಬಯೋಗ್ರಫಿ - ₹5 ಕೋಟಿ
- ಟೊಯೋಟಾ ಲ್ಯಾಂಡ್ ಕ್ರೂಸರ್ - ₹1.36 ಕೋಟಿ
- ಮರ್ಸಿಡಿಸ್ GL350 - ₹78 ಲಕ್ಷ
- ಟೊಯೋಟಾ ವೆಲ್‌ಫೈರ್ - ₹90 ಲಕ್ಷ
- ಅವರು ಖಾಸಗಿ ಪ್ರಯಾಣಕ್ಕೆ ಹೆಚ್ಚಾಗಿ ವೆಲ್‌ಫೈರ್ ಬಳಸುತ್ತಾರೆ.
ಐಷಾರಾಮಿ ಗಡಿಯಾರಗಳ ಸಂಗ್ರಹ ಸಮಯಕ್ಕೂ ಮೀರಿದ ಶೈಲಿ
- ಪಾಟೆಕ್ ಫಿಲಿಪ್ - ₹75 ಲಕ್ಷ+
- ರಿಚರ್ಡ್ ಮಿಲ್ಲೆ - ₹45 ಲಕ್ಷ+
- ಬ್ರೆಗುಟ್ - ₹22 ಲಕ್ಷ
- ರೋಲೆಕ್ಸ್ ಯಾಟ್ ಮಾಸ್ಟರ್ - ₹14-24 ಲಕ್ಷ
- ಮಾಂಟ್‌ಬ್ಲಾಂಕ್ - ₹4 ಲಕ್ಷ

ಹೈಡ್‌ಅವೇ ಈಗ ಎಲ್ಲರಿಗೂ ಲಭ್ಯವಿರುವ ಐಷಾರಾಮಿ ವಾಸ್ತವ್ಯ
ಹೈಡ್‌ಅವೇ, ಊಟಿ ಲವ್‌ಡೇಲ್‌ನಲ್ಲಿ ಇರುವ ಮೋಹನ್ ಲಾಲ್ ಅವರ ರಜಾ ನಿವಾಸ ಈಗ Marriott Bonvoy Villas ಮೂಲಕ ಬುಕ್ಕಿಂಗ್ ಗೆ ಲಭ್ಯವಿದೆ
ವೈಶಿಷ್ಟ್ಯಗಳು:
- ಬಾರ್ಬೆಕ್ಯೂ ರಾತ್ರಿಗಳಿಗೆ ಸೂಕ್ತವಾದ ವಿಸ್ತಾರವಾದ ಉದ್ಯಾನ, ಪ್ರತಿ ರಾತ್ರಿ ₹35,000
- ಗನ್ ಹೌಸ್ , ಖಾಸಗಿ ಬಾರ್ ಮತ್ತು ಸಿನೆಮಾ ಮ್ಯೂಸಿಯಂ
- ಫ್ಯಾಮಿಲಿ ರೂಮ್ , ಸಿನಿಮಾ ಸ್ಮರಣಿಕೆಗಳಿಂದ ತುಂಬಿದ ಕೋಣೆ
- ಅಡುಗೆಯ ಕೆಲಸ ನಿರ್ವಹಿಸುತ್ತಿರುವ ಕುಟುಂಬದ ಶೆಫ್
- ಮೋಹನ್ ಲಾಲ್‌ನ ನಿವ್ವಳ ಮೌಲ್ಯ
ಟೈಮ್ಸ್ ಆಫ್ ಇಂಡಿಯಾ ಪ್ರಕಾರ, ಅವರ ನಿವ್ವಳ ಮೌಲ್ಯ ₹421 ಕೋಟಿ (ಅಂದಾಜು $50 ಮಿಲಿಯನ್). ಪ್ರತಿ ಚಿತ್ರಕ್ಕೆ ₹8-₹17 ಕೋಟಿ, ಗೇಮ್ ಶೋಗೆ ₹18 ಕೋಟಿ, ವಾರ್ಷಿಕ ಆದಾಯ ₹40 ಕೋಟಿ+. ಇದು ಸಂಭಾವನೆ, ಹೂಡಿಕೆ ಹಾಗೂ ನಿರ್ಮಾಣಗಳ ಹೊರತು.





