ಕುಂಬಳೆ: ನಿರಂತರ ಸುರಿದ ಮಳೆಗೆ ಪುತ್ತಿಗೆ ಪಂಚಾಯತಿಯ ಒಂದನೇ ವಾರ್ಡು ಚನ್ನಿಕೋಡಿಯ ಡೆನ್ನಿಸ್ ಜೋಸೆಫ್ ಅವರ ಮನೆ ಸಮೀಪದಲ್ಲಿ ಗುಡ್ಡ ಕುಸಿದು, ನೀರು ಆವರಿಸಿಕೊಂಡಿದೆ. ಮಳೆ ಮುಂದುವರಿದರೆ ಸಮೀಪದ ಕೃಷಿ ತೋಟವೂ ಪೂರ್ತಿಯಾಗಿ ಮುಳುಗುವ ಸಾಧ್ಯತೆ ಇದ್ದು, ಆತಂಕ ಸೃಷ್ಟಿಸಿದೆ. ಪುತ್ತಿಗೆ ಪಂಚಾಯತಿ ತಂಡವು ಪ್ರದೇಶಕ್ಕೆ ಭೇಟಿ ನೀಡಿದೆ.
ಪುತ್ತಿಗೆ ಪಂಚಾಯತಿ ಕಾರ್ಯದರ್ಶಿ ನಾರಾಯಣ ನಾಯ್ಕ್, ಸಹಾಯಕ ಕಾರ್ಯದರ್ಶಿ ಮನೋಜ್ ಮುಕುಂದನ್, ಎನ್‍ಆರ್‍ಇಜಿ ಎಂಜಿನಿಯರ್ ಪ್ರಜ್ವಲ್, ಸಿಬಂದಿಗಳಾದ ಸಂದೇಶ್ ಮತ್ತಿತರರು, ಪಂಚಾಯತ್ ಸದಸ್ಯ ಗಂಗಾಧರ ಭೇಟಿ ನೀಡಿದರು.




.jpg)

